More

    ತಲೆಮರಿಸಿಕೊಂಡವರ ಬಂಧನಕ್ಕೆ ತಂಡ ರಚನೆ

    ಚಿಕ್ಕಮಗಳೂರು: ಅಕ್ರಮ ಭೂ ಮಂಜೂರು ಪ್ರಕರಣ ಸಂಬಂಧ ಕಡೂರು ತಾಲೂಕಿನ ಹಿಂದಿನ ತಹಸೀಲ್ದಾರ್ ಉಮೇಶ್‌ರನ್ನು ಬಂಧಿಸಲಾಗಿದ್ದು ವಿಚಾರಣೆಗಾಗಿ 4 ದಿನ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ತಿಳಿಸಿದರು.

    ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸೌಹಾರ್ದ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ತಾಲೂಕಿನ ಉಳಿಗನಾರು ಗ್ರಾಮದಲ್ಲಿ ಸರ್ಕಾರಿ ಜಮೀನು ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಅಕ್ರಮ ದಾಖಲಾತಿ ಮಾಡಿರುವ ಆರೋಪವನ್ನು ಜೆ.ಉಮೇಶ್ ಎದುರಿಸುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದರು.
    ತರೀಕೆರೆ ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ಅವರು ಅಕ್ರಮ ಭೂ ಮಂಜೂರು ಸಂಬಂಧ ತಹಸೀಲ್ದಾರ್ ಜೆ.ಉಮೇಶ್ ಸೇರಿದಂತೆ ಒಟ್ಟು ಮೂವರ ವಿರುದ್ಧ ದೂರು ನೀಡಿದ್ದರು. ಅವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಂಬಂಧ ನಾಲ್ಕು ದಿನ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ತಲೆಮರಿಸಿಕೊಂಡಿರುವವರನ್ನು ಬಂಧಿಸಲು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಹೇಳಿಸಿದರು.

    ಪೊಲೀಸ್ ಇಲಾಖೆಗೆ ಯಾವುದೇ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದಾಗ ಗಂಭೀರವಾಗಿ ಪರಿಗಣಿಸಿ ನೊಂದವರಿಗೆ ನ್ಯಾಯದೊರಕಿಸಲಾವುದು. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸಮಪರ್ಕವಾಗಿದ್ದು, ಕಾನೂನು ಸುವ್ಯಸ್ಥೆ ಕಾಪಾಡುವುದು, ಅಪರಾಧ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವುದು ಮೂಲ ಉದ್ದೇಶವಾಗಿದೆ, ಇದಕ್ಕೆ ನಾಗರೀಕರು, ವಿವಿಧ ಸಂಘಸಂಸ್ಥೆಗಳವರು ಸಹಕಾರ ನೀಡಬೇಕು ಎಂದು ಡಾ.ವಿಕ್ರಂ ಅಮಟೆ ಕೋರಿದರು.
    ಜಿಲ್ಲೆಯಲ್ಲಿ ಕೊಪ್ಪ, ತರೀಕೆರೆ ಹಾಗೂ ಚಿಕ್ಕಮಗಳೂರು ಉಪ ವಿಭಾಗಗಳು ಇದ್ದು, ಪೊಲೀಸ್ ಠಾಣೆಗೆ ಗಲಾಟೆ, ಕಳ್ಳತನ, ಫೋಕ್ಸೊ ಹೀಗೆ ವಿವಿಧ ರೀತಿಯ ದೂರುಗಳು ಬರುತ್ತವೆ, ಇಂತಹವನ್ನು ತಡೆಗಟ್ಟಲು ಕ್ರಮವಹಿಸಲಾಗುವುದು. ಠಾಣೆಯಲ್ಲಿರುವ ಸಿಪಿಐ, ಪಿಎಸ್‌ಐ, ಪೇದೆಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿದಾಗ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಮಾಡಲು ಸಾಧ್ಯ, ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದರು.
    ಪ್ರತಿಠಾಣೆಗೂ ಭೇಟಿ ನೀಡಿ ಜನತೆಯೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಅಲಿಸಲಾಗುವುದು. ಜಿಲ್ಲೆಯಲ್ಲಿ ಹೆಚ್ಚಾಗಿ ಪ್ರವಾಸಿ ತಾಣಗಳು ಇರುವುದರಿಂದ ವಾರಾಂತ್ಯ ಸೇರಿದಂತೆ ಉಳಿದ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅವರಿಗೆ ರಕ್ಷಣೆ ನೀಡಲಾಗುವುದು, ಅದೇ ರೀತಿ ಪ್ರವಾಸಿ ತಾಣಗಳಲ್ಲಿ ಯಾವುದೇ ರೀತಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ, ಯಾರೇ ವಿರುದ್ಧ ದೂರು ಬಂದರು ದೂರು ದಾಖಲಿಸಲಾಗುವುದು ಎಂದು ಹೇಳಿದರು.
    ಜಿಲ್ಲೆಯ ಜನತೆ ನೆಮ್ಮದಿ ಜೀವಿಸಲು ಪ್ರಮುಖ ಆದ್ಯತೆ ನೀಡುವುದು, ದಲಿತ ದೌರ್ಜನ್ಯ ಕಾಯ್ದೆ, ಅತ್ಯಾಚಾರ ಪ್ರಕರಣಗಳನ್ನು ಕಡಿಮೆಗೊಳಿಸುವ ಸಲುವಾಗಿ ತಿಳುವಳಿಕೆ ಮೂಡಿಸುವ ಪ್ರಯತ್ನಕ್ಕೆ ಮುಂದಾಗುವುದು ಆ ಹಿನ್ನೆಲೆ ಯಲ್ಲಿ ನಾಗರೀಕರ ಸಂಪೂರ್ಣ ಸಹಕಾರವು ಅವಶ್ಯಕವಾಗಿದೆ ಎಂದರು.
    ನಗರದ ಪ್ರಮುಖ ರಸ್ತೆಗಳಲ್ಲಿ ಒನ್‌ವೇ ನಾಮಫಲಕಗಳಿದ್ದರೂ ವಾಹನಗಳು ಸಾಗುತ್ತಿವೆ. ಜೊತೆಗೆ ಮಹತ್ಮ ಗಾಂಧಿ ಪಾರ್ಕ್ ಮುಖ್ಯರಸ್ತೆಯಲ್ಲಿ ಪ್ರವಾಸಿಗರು ಜೀಪುಗಳನ್ನು ಓವರ್‌ಟೆಕ್ ಮಾಡುವ ಮೂಲಕ ಪಾದಚಾ ರಿಗಳು ಹಾಗೂ ಅಕ್ಕಪಕ್ಕದ ವಾಹನ ಸವಾರರಿಗೆ ತೊಂದರೆ ನೀಡುತ್ತಿರುವ ಸಂಬಂಧ ಪ್ರತಿಯಿಸಿದ ಅವರು ಅತಿವೇಗ ಹಾಗೂ ಕಾನೂನು ನಿಯಮ ಉಲ್ಲಂಘಿಸುವವರಿಗೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
    ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೃಷ್ಣಮೂರ್ತಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts