More

    ಐಪಿಎಲ್ ಮುಂದುವರಿದ ಭಾಗಕ್ಕೆ ವಿದೇಶಿಗರು ಅನುಮಾನ

    ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ನ ಮುಂದುವರಿದ ಭಾಗವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿರುವ ಟೂರ್ನಿಯ ಉಳಿದ 31 ಪಂದ್ಯಗಳು ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 10 ರವರೆಗೆ ಯುಎಇಯಲ್ಲಿ ನಡೆಯುವ ಸಾಧ್ಯತೆಗಳಿವೆ. ಬಿಸಿಸಿಐ ಈಗಾಗಲೇ ತರಾತುರಿಯಲ್ಲಿ ವೇಳಾಪಟ್ಟಿ ಪ್ರಕಟಿಸಲು ಸಿದ್ಧತೆ ಕೈಗೊಂಡಿದೆ. ಆದರೆ, ವಿದೇಶಿ ಆಟಗಾರರು ಲೀಗ್‌ನಲ್ಲಿ ಆಡುವುದು ಅನುಮಾನ ಮೂಡಿಸಿದ್ದು, ಇದು ಬಿಸಿಸಿಐಗೆ ಹೊಸ ಸಂಕಷ್ಟ ತಂದಿದೆ. ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ ತಂಡಗಳು ಇದೇ ವೇಳೆ ದ್ವಿಪಕ್ಷೀಯ ಸರಣಿ ಆಡಬೇಕಿದೆ. ಅಲ್ಲದೆ, ವೆಸ್ಟ್ ಇಂಡೀಸ್ ಆಟಗಾರರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಬೇಕಿದೆ, ಸೆ.19ಕ್ಕೆ ಸಿಪಿಎಲ್ ಮುಕ್ತಾಯಗೊಂಡರೂ ತಕ್ಷಣವೇ ಯುಎಇಗೆ ಆಗಮಿಸಿದರೂ ಮೊದಲ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

    *ಇಂಗ್ಲೆಂಡ್ ಆಟಗಾರರು: ಲಭ್ಯವಿಲ್ಲ
    ಇಂಗ್ಲೆಂಡ್ ಆಟಗಾರರು ಟೂರ್ನಿಯಲ್ಲಿ ಲಭ್ಯರಾಗುವುದು ಅನುಮಾನ ಮೂಡಿಸಿದೆ. ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ತಂಡ ಮೂರು ಪಂದ್ಯ ಏಕದಿನ ಹಾಗೂ ಪಾಕಿಸ್ತಾನ ತಂಡ 2 ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್‌ಗೆ ಆಗಮಿಸಲಿವೆ. 3 ಏಕದಿನ ಸರಣಿ ಆಡಲು ಬಾಂಗ್ಲಾದೇಶ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.
    – ಆಟಗಾರರು: ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಇವೊಯಿನ್ ಮಾರ್ಗನ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ‌್ರನ್, ಟಾಮ್ ಕರ‌್ರನ್, ಕ್ರಿಸ್ ವೋಕ್ಸ್, ಜೇಸನ್ ರಾಯ್, ಸ್ಯಾಮ್ ಬಿಲಿಂಗ್ಸ್, ಡೇವಿಡ್ ಮಲಾನ್, ಕ್ರಿಸ್ ಜೋರ್ಡಾನ್, ಜಾನಿ ಬೇರ್‌ಸ್ಟೋ
    ===
    * ನ್ಯೂಜಿಲೆಂಡ್ ಆಟಗಾರರು: ಲಭ್ಯವಿಲ್ಲ
    ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಎದುರು ಯುಎಇಯಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.
    – ಆಟಗಾರರು: ಕೇನ್ ವಿಲಿಯಮ್ಸನ್, ಆಡಂ ಮಿಲ್ನೆ, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ಲಾಕಿ ರ್ಗ್ಯಸನ್, ಟಿಮ್ ಸೀರ್ಟ್, ಫಿನ್ ಅಲೆನ್, ಕೈಲ್ ಜೇಮಿಸನ್
    ===
    * ಆಸ್ಟ್ರೇಲಿಯಾ ಆಟಗಾರರು: ಬಹುತೇಕ ಲಭ್ಯ
    ಟಿ20 ವಿಶ್ವಕಪ್ ಪೂರ್ವಭಾವಿಯಾಗಿ ಅಕ್ಟೋಬರ್‌ನಲ್ಲಿ ಶ್ರೀಲಂಕಾ ತಂಡದ ಎದುರು 3 ಟಿ20 ಪಂದ್ಯಗಳು ನಿಗದಿಯಾಗಿವೆ.
    ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಜೇಲ್ ರಿಚರ್ಡ್‌ಸನ್, ಮಾರ್ಕಸ್ ಸ್ಟೋಯಿನಿಸ್, ಸ್ಟೀವನ್ ಸ್ಮಿತ್, ರಿಲೀ ಮೆರೆಡಿತ್, ನಥಾನ್ ಕೌಲ್ಟರ್ ನಿಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಡೇನಿಯಲ್ ಕ್ರಿಶ್ಚಿಯನ್, ಕ್ರಿಸ್ ಲ್ಯಾನ್, ಆ್ಯಂಡ್ರ್ಯೋ ಟೈ, ಬೆನ್ ಕಟ್ಟಿಂಗ್, ಜೇಸನ್ ಬೆಹ್ರೆನ್‌ಡಾರ್, ಮೋಯ್ಸೆಸ್ ಹೆನ್ರಿಕ್ಸ್, ಆಡಂ ಜಂಪಾ.
    ===
    * ದಕ್ಷಿಣ ಆಫ್ರಿಕಾ ಆಟಗಾರರು : ಬಹುತೇಕ ಲಭ್ಯ
    ಸೆಪ್ಟೆಂಬರ್‌ನಲ್ಲಿ ನೆದರ್ಲೆಂಡ್ ವಿರುದ್ಧ ಸರಣಿ ನಡೆಯಲಿದ್ದು, ಕೆಲ ಆಟಗಾರರು ಸಿಪಿಎಲ್‌ಗೆ ತೆರಳಲಿದ್ದಾರೆ.
    ಆಟಗಾರರು: ಕ್ವಿಂಟನ್ ಡಿಕಾಕ್, ಫಾಫ್ ಡು ಪ್ಲೆಸಿಸ್, ಕಗಿಸೊ ರಬಾಡ, ಇಮ್ರಾನ್ ತಾಹಿರ್, ಅನ್ರಿಚ್ ನೋರ್ಜೆ, ಕ್ರಿಸ್ ಮಾರಿಸ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಮಾರ್ಕೊ ಜೇಸೆನ್
    ===
    * ಬಾಂಗ್ಲಾದೇಶ ಆಟಗಾರರು : ಅನುಮಾನ
    ಈ ಅವಧಿಯಲ್ಲಿ ಇಂಗ್ಲೆಂಡ್ ಪ್ರವಾಸ ನಿಗದಿಯಾಗಿದ್ದು, ಇಬ್ಬರು ಮಾತ್ರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.
    ಆಟಗಾರರು: ಶಕೀಬ್ ಅಲ್ ಹಸನ್, ಮುಸ್ತಾಫಿಝರ್ ರೆಹಮಾನ್.
    ===
    * ವೆಸ್ಟ್ ಇಂಡೀಸ್: ಬಹುತೇಕ ಲಭ್ಯ
    ವೆಸ್ಟ್ ಇಂಡೀಸ್‌ನ ಬಹುತೇಕ ಆಟಗಾರರು ಲೀಗ್‌ಗೆ ಲಭ್ಯವಿದ್ದು, ಸೆಪ್ಟೆಂಬರ್ 19ರವರೆಗೆ ತವರಿನಲ್ಲಿ ಸಿಪಿಎಲ್ ನಡೆಯಲಿದೆ. ಲೀಗ್ ಮುಕ್ತಾಯದ ಬಳಿಕ ಯುಎಇಗೆ ಆಗಮಿಸಬೇಕಿದೆ. ಕ್ವಾರಂಟೈನ್‌ಗೆ ಒಳಗಾದರೆ ಆರಂಭಿಕ 10 ದಿನಗಳ ಕಾಲ ಲೀಗ್‌ಗೆ ಅಲಭ್ಯರಾಗಬಹುದು.

    ಆಟಗಾರರು: ಕೈರಾನ್ ಪೊಲ್ಲಾರ್ಡ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಶಿಮ್ರೋನ್ ಹೆಟ್ಮೆಯರ್, ಸುನೀಲ್ ನಾರಾಯಣ್, ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ಜೇಸನ್ ಹೋಲ್ಡರ್.

    ಅಫ್ಘಾನಿಸ್ತಾನ: ಲಭ್ಯವಿಲ್ಲ
    ಯುಎಇಯಲ್ಲಿ ಪಾಕಿಸ್ತಾನ ಎದುರು 3 ಏಕದಿನ ಪಂದ್ಯಗಳ ಸರಣಿ ನಡೆಯುವುದರಿಂದ ಅ್ಘಾನಿಸ್ತಾನ ತಂಡದ ಆಟಗಾರರು ಲಭ್ಯರಾಗುವುದು ಅನುಮಾನ
    ಆಟಗಾರರು: ರಶೀದ್ ಖಾನ್, ಮೊಹಮದ್ ನಬಿ, ಮುಜೀಬ್ ಜರ್ದಾನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts