More

    ಹಿಂದಿನ ಕಹಿ ಘಟನೆ ಮರೆತು ಪಕ್ಷಕ್ಕಾಗಿ ಒಂದಾಗಿ

    ಸೊರಬ: ಜೆಡಿಎಸ್‌ನಲ್ಲಿನ ಆಂತರಿಕ ಗೊಂದಲದಿಂದ ಪಕ್ಷದ ಬಲವರ್ಧನೆಗೆ ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಮೂಲಕ ಗಟ್ಟಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಾಲೂಕು ಜೆಡಿಎಸ್‌ನ ನೂತನ ಅಧ್ಯಕ್ಷ ಗಣಪತಿ ಹೇಳಿದರು.

    ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಹಾಗೂ ಜಿಲ್ಲಾ ಸಮಿತಿ ನನ್ನನ್ನು ಗುರುತಿಸಿ ತಾಲೂಕಿನ ಜವಾಬ್ದಾರಿ ನೀಡಿದೆ. ಪ್ರತಿಯೊಬ್ಬ ಕಾರ್ಯಕರ್ತರ ವಿಶ್ವಾಸ ಪಡೆದು ಸಂಘಟನೆಗೆ ಒತ್ತು ನೀಡುವೆ. ಹಿಂದಿನ ಕಹಿ ಘಟನೆಗಳನ್ನು ಮರೆತು, ಕಾರ್ಯಕರ್ತರಲ್ಲ ಒಂದಾಗಬೇಕು. ಎಲ್ಲರ ಜತೆ ಚರ್ಚಿಸಿ ತಾಲೂಕು ಸಮಿತಿ ರಚಿಸಲಾಗುವುದು ಎಂದರು.
    ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ತಾಲೂಕಿನಲ್ಲಿ ಅನೇಕರು ಸಿದ್ಧಾಂತ ಮರೆತು ರಾಜಕೀಯ ನಾಯಕರಿಗೆ ಶರಣಾಗಿರುವುದನ್ನು ಕಂಡಿದ್ದೇನೆ. ಆದರೆ ನಾನು ಸಂದರ್ಭ ಬಂದರೆ ರಾಜಕಾರಣ ಬಿಟ್ಟೇನು ಹೊರತು ಸಿದ್ಧಾಂತ ಬಿಡುವುದಿಲ್ಲ. ಇಂದಿನ ರಾಜಕಾರಣ ಸ್ವಾರ್ಥದಿಂದ ಕೂಡಿದ್ದು ಹೋರಾಟ, ಸಮಾಜಸೇವೆಯಿಂದ ದೂರವಾಗಿದೆ. ರಾಜಕಾರಣಿ, ಅಧಿಕಾರಿ ಭ್ರಷ್ಟಾಚಾರಕ್ಕೆ ಇಳಿದರೆ ತಕ್ಕಪಾಠ ಕಲಿಸಬಹುದು. ಆದರೆ ಮತದಾರರೇ ಆಮಿಷಕ್ಕೆ, ಜಾತಿ, ಧರ್ಮ ಎಂದು ರಾಜಕಾರಣಕ್ಕಿಳಿದರೆ ಹೇಗೆ ಸರಿ ಪಡಿಸುವುದು ಎಂದು ಪ್ರಶ್ನಿಸಿದರು.
    ಪಕ್ಷದ ವತಿಯಿಂದ ನೂತನ ಅಧ್ಯಕ್ಷ ಗಣಪತಿ, ಬಾಸೂರು ಚಂದ್ರೇಗೌಡ ಅವರನ್ನು ಸನ್ಮಾನಿಸಲಾಯಿತು. ತುಳಜಪ್ಪ, ಜಗದೀಶ್ ಕೊಡಕಣಿ, ಶ್ರೀಧರ ಶೇಟ್, ಬಸವನಗೌಡ ಪಾಟೀಲ್, ರಾಮಪ್ಪ ಕೊಡಕಣಿ, ಹನುಮಂತಪ್ಪ, ಕುಮಾರ್, ನಾಗಪ್ಪ, ದಾನಪ್ಪ, ಅಜೀಜ್ ಅಹಮ್ಮದ್ ಜಡ್ಡಹಳ್ಳಿ, ಆನಂದಪ್ಪ ದ್ಯಾವಸ ಇತರರಿದ್ದರು.

    ಇಂದಿನ ರಾಜಕಾರಣದಲ್ಲಿ ಪ್ರೀತಿ, ವಿಶ್ವಾಸ ದೂರವಾಗಿ ದ್ವೇಷ ನೆಲೆಸಿದೆ. ಸಮಾಜ ನೆಮ್ಮದಿ ಕಳೆದುಕೊಂಡಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಂತಾಗಿದೆ. ಒಳ್ಳೆಯದನ್ನು ಬಯಸುತ್ತಿಲ್ಲ. ಅಖಂಡ ಭಾರತದಲ್ಲಿ ಎಲ್ಲರೂ ಒಟ್ಟಾಗಿ ಇರಬೇಕು. ಒಡೆದು ಆಳುವ ನೀತಿ ಸರಿಯಲ್ಲ. ತಾಲೂಕಿನಲ್ಲಿ ಪ್ರಾಮಾಣಿಕರು ರಾಜಕಾರಣ ಮಾಡಿದರೆ ಅವರನ್ನು ಬೆಂಬಲಿಸಿ, ಅವರ ಪರ ಹೋರಾಟ ಮಾಡುತ್ತೇನೆ. ದ್ವೇಷದ ರಾಜಕಾರಣ ಯಾರೂ ಮಾಡಬಾರದು. ಇನ್ಮುಂದೆ ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ.

    – ಬಾಸೂರು ಚಂದ್ರೇಗೌಡ,
    ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts