More

    VIDEO: ಬೆಳ್ಳಂಬೆಳಗ್ಗೆ ಕಾಡಾನೆಯಿಂದ ಸುಬ್ರಹ್ಮಣ್ಯ ರೌಂಡ್ಸ್​: ದೇವಸ್ಥಾನದ ಆನೆ ಎಂದು ತಪ್ಪು ತಿಳಿದ ಭಕ್ತರು

    ಸುಬ್ರಹ್ಮಣ್ಯ: ಕಾಡಾನೆಯೊಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನಲ್ಲಿ ಸುತ್ತಾಡಿ ಮತ್ತೆ ಕಾಡಿಗೆ ಮರಳಿರುವ ಘಟನೆ ವರದಿಯಾಗಿದೆ.

    ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ನೂಚಿಲ ಎಂಬಲ್ಲಿ ಇಂದು ಬೆಳಗ್ಗೆ ಕಾಡಾನೆ ಕಂಡುಬಂದಿದೆ. ಕೆಲ ಕಾಲ ರಸ್ತೆಯಲ್ಲಿ ಓಡಾಡಿದ ಆನೆ ನಂತರ ಕಾಡಿಗೆ ಮರಳಿದೆ. ಆನೆಯು ರಸ್ತೆಯಲ್ಲಿ ನಡೆಯುತ್ತಿದ್ದದ್ದನ್ನು ಕಂಡ ಕೆಲ ಭಕ್ತರು ಅದನ್ನು ದೇವಸ್ಥಾನದ ಆನೆ ಎಂದು ತಿಳಿದುಕೊಂಡಿದ್ದರು. ನಂತರ ಪರಿಶೀಲನೆ ನಡೆಸಿದಾಗ ಅದು ಕಾಡಾನೆ ಎನ್ನುವುದು ತಿಳಿದುಬಂದಿದೆ.

    ಸುಬ್ರಹ್ಮಣ್ಯದ ಹೊರಭಾಗದಲ್ಲಿರುವ ಕುಲ್ಕುಂದ ಮತ್ತಿತರ ಪ್ರದೇಶಗಳಿಗೆ ಕಾಡಾನೆ ಆಗಾಗ ಬಂದು ಹೋಗುತ್ತಿರುತ್ತದೆ. ಆದರೆ ಇದೇ ಮೊದಲನೇ ಬಾರಿಗೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಯು ಯಾರಿಗೂ ಏನೂ ತೊಂದರೆ ನೀಡದೆ ತನ್ನ ಸ್ಥಳಕ್ಕೆ ಮರಳಿದೆ.

    ಬೆಳ್ಳಂಬೆಳಗ್ಗೆ ಕಾಡಾನೆಯಿಂದ ಸುಬ್ರಹ್ಮಣ್ಯ ರೌಂಡ್ಸ್​: ದೇವಸ್ಥಾನದ ಆನೆ ಎಂದು ತಪ್ಪು ತಿಳಿದ ಭಕ್ತರು

    ಬೆಳ್ಳಂಬೆಳಗ್ಗೆ ಕಾಡಾನೆಯಿಂದ ಸುಬ್ರಹ್ಮಣ್ಯ ರೌಂಡ್ಸ್​: ದೇವಸ್ಥಾನದ ಆನೆ ಎಂದು ತಪ್ಪು ತಿಳಿದ ಭಕ್ತರು

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಫೆಬ್ರವರಿ 19, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts