More

  ಹುಲಿ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್

  ಸಿದ್ದಾಪುರ : ಮಾಲ್ದಾರೆ ಗ್ರಾಮ ಪಂಚಾಯಿತಿಯ ಬಾಡಗ-ಬಾಣಂಗಾಲ ಗ್ರಾಮದ ಮಠ ಎಂಬ ಸ್ಥಳದಲ್ಲಿ ಹುಲಿ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಕೂಂಬಿಂಗ್ ನಡೆಸಿದರು.

  ಕಳೆದ ಎರಡು ದಿನದ ಹಿಂದೆ ಸ್ಥಳೀಯರು ನಡೆದುಕೊಂಡು ಹೋಗುವ ವೇಳೆ ಕಾಫಿ ತೋಟದ ಬಳಿ ಹುಲಿಯೊಂದು ಮಲಗಿದ್ದನ್ನು ನೋಡಿದ್ದರು. ಕೆಲ ದಿನಗಳ ಹಿಂದೆ ಗ್ರಾಮದ ಪ್ರವೀಣ್ ಅವರ ಹಸುವನ್ನು ಹುಲಿ ಕೊಂದು ಹಾಕಿತ್ತು. ಹುಲಿಯ ಓಡಾಟದ ಬಗ್ಗೆ ಗ್ರಾಮದಲ್ಲಿ ಆತಂಕ ಮೂಡಿದ್ದು, ಇದೀಗ ಅರಣ್ಯ ಇಲಾಖೆ ಆರ್‌ಆರ್‌ಟಿ ತಂಡ ತೋಟಗಳಲ್ಲಿ ಕೂಂಬಿಂಗ್ ನಡೆಸಿತು. ಕಾರ್ಯಾಚರಣೆಯಲ್ಲಿ ಉಪ ವಲಯ ಅಧಿಕಾರಿ ಶ್ರೀನಿವಾಸ್, ಆರ್‌ಆರ್‌ಟಿ ತಂಡದ ಗುರುಪ್ರಸಾದ್, ಶಂಕರ್, ಇತರ ಸಿಬ್ಬಂದಿ ಹಾಜರಿದ್ದರು.

  ಚಿತ್ರ 02ಎಸ್ ಡಿ ಪಿ 02:-ಆರ್.ಆರ್.ಟಿ ತಂಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts