More

    ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಕಳಸ ಆರ್​ಎಫ್​ಒ ಅಮಾನತು ಮಾಡಿ

    ಕಳಸ: ರೈತರ ಮೇಲೆ ದೌರ್ಜನ್ಯ ನಡೆಸುತ್ತಿರುವ ಕಳಸ ಆರ್​ಎಫ್​ಒ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕಳಸ ಹೋಬಳಿ ಬಿಜೆಪಿ ಘಟಕದ ಕಾರ್ಯಕರ್ತರು ಮಂಗಳವಾರ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

    ಕಳಸ ಹೋಬಳಿ ಬಿಜೆಪಿ ಅಧ್ಯಕ್ಷ ಗಿರೀಶ್ ಹೆಮ್ಮಕ್ಕಿ ಮಾತನಾಡಿ, ಜನವಸತಿ ಇರುವ ಪ್ರದೇಶಗಳನ್ನು ಅರಣ್ಯ ಇಲಾಖೆ ಡೀಮ್್ಡ ಫಾರೆಸ್ಟ್ ಎಂದು ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದೆ. ಹಲವು ವರ್ಷಗಳಿಂದ ಕಾಫಿ ಕೃಷಿ ಮಾಡಿಕೊಂಡಿದ್ದು, ಅದರಲ್ಲಿ ಫಸಲು ಬರುವ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಇದು ಅರಣ್ಯ ಜಾಗವೆಂದು ಕಾಫಿ ಗಿಡಗಳನ್ನು ಕಡಿದು ಹಾಕಲಾಗುತ್ತಿದೆ ಎಂದು ದೂರಿದರು.

    ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿರುವುದರಿಂದ ಇಲ್ಲಿನ ಜನರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳು ಶೆಡ್ ಹಾಕಿ ಕುಳಿತರೆ ಅದನ್ನು ಅರಣ್ಯ ಭೂಮಿ ಎಂದು ಹೇಳಿ ಶೆಡ್​ಗಳನ್ನು ಕಿತ್ತುಹಾಕುತ್ತಿದ್ದಾರೆ. ರೈತರಿಗೆ, ಕೂಲಿ ಕಾರ್ವಿುಕರಿಗೆ ತೊಂದರೆ ನೀಡುತ್ತಿರುವ ಆರ್​ಎಫ್​ಒ ಅವರನ್ನು ಕೂಡಲೇ ಅಮಾನತು ಮಾಡಬೇಕು. ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಗುರುತಿಸಬೇಕು. ಅರಣ್ಯ ಭೂಮಿಯನ್ನು ಮಾತ್ರ ಡೀಮ್್ಡ ಫಾರೆಸ್ಟ್ ಎಂದು ಗುರುತಿಸಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ಮುಖಂಡ ಜಗದೀಶ್ ನೆಲ್ಲಿಬೀಡು ಮಾತನಾಡಿ, ಕುದುರೆಮುಖ ಭಾಗದಲ್ಲಿ ರಸ್ತೆ ದುರಸ್ತಿಯನ್ನು ಅರಣ್ಯ ಇಲಾಖೆ ತಡೆದಿದೆ. ಪಂಚಾಯಿತಿಯಿಂದ ಕಾಮಗಾರಿಗಳನ್ನು ನಡೆಸಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಕುಡಿಯುವ ನೀರು ತರಲು ತೊಂದರೆ ನೀಡುತ್ತಿದ್ದಾರೆ. ಕುದುರೆಮುಖದ ಭೂಮಿಯನ್ನು ಅಂಕೋಲ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಬದಲಿ ಭೂಮಿಯಾಗಿ ಅರಣ್ಯ ಇಲಾಖೆಗೆ ಒಪ್ಪಿಸಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

    ಬಿಜೆಪಿ ಮುಖಂಡರಾದ ರಂಗನಾಥ್, ಕಾರ್ತಿಕ್ ಶಾಸ್ತ್ರಿ, ಜಯಂತ್, ಶ್ರೀಕಾಂತ್, ಸುರೇಶ್, ಪ್ರದೀಪ್, ಜಿನರಾಜಯ್ಯ, ಪ್ರವೀಣ್, ಚಂದ್ರು, ಮಹೇಂದ್ರ, ಪ್ರಕಾಶ್, ವಿಜಯಕುಮಾರ್, ಬಾಲಕೃಷ್ಣ ಪ್ರಭು, ಈಶ್ವರ, ಜಿನರಾಜಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts