More

    ಹೊಸ ಮೊಬೈಲ್​ಫೋನ್ ನೀಡಲು ಒತ್ತಾಯ

    ಮುಂಡಗೋಡ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಂದ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಿಡಿಪಿಒ ದೀಪಾ ಬಂಗೇರ ಅವರಿಗೆ ಮನವಿ ಸಲ್ಲಿಸಿದರು.

    ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ ಮೊಬೈಲ್​ಫೋನ್​ಗಳು ಹಾಳಾಗಿದ್ದು, ಹೊಸ ಮೊಬೈಲ್​ಫೋನ್​ಗಳನ್ನುನೀಡಬೇಕು, ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ ಜಾರಿಗೊಳಿಸುವುದು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಗ್ರಾಚುಟಿ ಕೊಡುವ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪ ಅನ್ನು ಜಾರಿಗೊಳಿಸಬೇಕು, ಇತರ ಇಲಾಖೆಗಳ ಕೆಲಸ ಅಂಗನವಾಡಿಯವರಿಗೆ ಹಚ್ಚಬಾರದು, ಅಂಗನವಾಡಿಗಳನ್ನು ಯಾವುದೇ ರೀತಿಯಲ್ಲಿ ಖಾಸಗಿಕರಣಗೊಳಿಸಬಾರದು. ದೇಶದಲ್ಲಿನ 6 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಎನ್ನುವ ಕಾಯ್ದೆ ರೂಪಿಸಿ ಜಾರಿ ಮಾಡಬೇಕು. ಅದಕ್ಕೆ ಅಗತ್ಯವಾದ ತರಬೇತಿಯನ್ನು ನಮಗೆ ನೀಡಬೇಕು. ಸರ್ಕಾರಿ ನೌಕರರೆಂದು ನಮ್ಮನ್ನು ಪರಿಗಣಿಸಬೇಕು ಎಂಬಿತ್ಯಾದಿ ಬೇಡಿಕೆಗಳುಳ್ಳ ಮನವಿಯನ್ನು ಸಿಡಿಪಿಒಗೆ ನೀಡಿದರು.

    ಅಂಕೋಲಾದಲ್ಲೂ ಸಿಡಿಪಿಒಗೆ ಮನವಿ

    ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್​ಫೋನ್ ನೀಡುವುದು ಮತ್ತು 2023ರ ಬಜೆಟ್​ನಲ್ಲಿ ಹೆಚ್ಚಳವಾದ 1 ಸಾವಿರ ರೂ. ಗೌರವಧನ ಬಿಡುಗಡೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಅಂಕೋಲಾ ಸಮಿತಿಯವರು ಸೋಮವಾರ ಪ್ರತಿಭಟನೆಯನ್ನು ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭಿಸಿ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಸಿಡಿಪಿಒ ಅವರಿಗೆ ಮನವಿ ಸಲ್ಲಿಸಿದರು.

    ಸಿಐಟಿಯು ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅಗಸೂರು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್​ಫೋನ್​ಗಳನ್ನು ಕೊಡಬೇಕು. ಹಂತಹಂತವಾಗಿ ಅವುಗಳಿಗೆ ಬದಲಾಗಿ ಟ್ಯಾಬ್ಲೆಟ್​ಗಳನ್ನು ಕೊಡಬೇಕು. ಅವುಗಳಿಗೆ ನೆಟ್ವರ್ಕ್, ಡಾಟ್ ಪ್ಯಾಕ್ಸ್​ಗಳನ್ನು ಖಾತರಿಪಡಿಸುವ ಮೂಲಕ ಕೆಲಸಕ್ಕೆ ಪ್ರೋತ್ಸಾಹಿಸಬೇಕು ಎಂದರು.

    ಸಿಡಿಪಿಒ ಸವಿತಾ ಶಾಸ್ತ್ರಿಮಠ ಮನವಿ ಸ್ವೀಕರಿಸಿದರು. ಸಿಐಟಿಯು ತಾಲೂಕಾಧ್ಯಕ್ಷ ಬಿ.ಎಚ್. ನಾಯಕ, ಅಂಗನವಾಡಿ ನೌಕರರ ಸಂಘ ತಾಲೂಕಾಧ್ಯಕ್ಷೆ ಮೀನಾಕ್ಷಿ ನಾಯಕ, ಕಾರ್ಯದರ್ಶಿ ಪವಿತ್ರಾ ಆಗೇರ, ಖಜಾಂಜಿ ಗೀತಾ ಗೌಡ ಸೇರಿ ನೂರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts