More

    ವರುಣಾರ್ಭಟಕ್ಕೆ ನದಿಗಳಲ್ಲಿ ಉಬ್ಬರ

    ಚಿಕ್ಕೋಡಿ: ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆ ಹಾಗೂ ಚಿಕ್ಕೋಡಿ ತಾಲೂಕಿನ ನದಿ ತೀರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,14,252 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸಂಭವನೀಯ ಪ್ರವಾಹ ಎದುರಿಸಲು ಉಪವಿಭಾಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಉಪವಿಭಾಗಾಕಾರಿ ಮಾಧವ ಗಿತ್ತೆ ತಿಳಿಸಿದ್ದಾರೆ.

    ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 87,500 ಕ್ಯೂಸೆಕ್ ಮತ್ತು ದೂಧಗಂಗಾ ನದಿಯಿಂದ 26,752 ಕ್ಯೂಸೆಕ್ ಸೇರಿ ಕಲ್ಲೋಳ ಬ್ಯಾರೇಜ್ ಮೂಲಕ ಒಟ್ಟು 1,14,252 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕೃಷ್ಣಾ, ದೂಧಗಂಗಾ ಸೇರಿ ಉಪನದಿಗಳಿಗೆ ನಿರಂತರ ನೀರು ಹರಿದುಬರುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಯ ಕೆಳ ಹಂತದ ಎಲ್ಲ ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಕಂದಾಯ ಇಲಾಖೆ ಅಕಾರಿಗಳು ಹಾಗೂ ಪೊಲೀಸರು ನಿರಂತರವಾಗಿ ನದಿ ತೀರದ ಬ್ಯಾರೇಜ್‌ಗಳ ಹತ್ತಿರ ಇದ್ದು, ತಾಲೂಕಾಡಳಿತಕ್ಕೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ನದಿ ನೀರಿನ ಮಟ್ಟ ಏರುತ್ತಿರುವುದರಿಂದ ಸಾರ್ವಜನಿಕರು ನದಿ ತೀರಕ್ಕೆ ಹೋಗಬಾರದೆಂದು ಕಂದಾಯ ಇಲಾಖೆಯ ಅಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts