More

    ಸಂಬಳಕ್ಕಾಗಿ ಕಾರ್ಮಿಕರ ಪ್ರತಿಭಟನೆ

    ಬೆಳಗಾವಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಕತಿಯಲ್ಲಿರುವ ಖಾಸಗಿ ಕಾರ್ಖಾನೆ ಬಂದ್ ಆಗಿದ್ದು, ಮಾಲೀಕರು ನಮಗೆ ಸಂಬಳ
    ನೀಡಿಲ್ಲ. ನಮಗೆ ವೇತನ ಕೊಡಿಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕಂಪನಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಮಾರ್ಚ್ 24ರಂದು ಕಾರ್ಖಾನೆ ಬಂದ್ ಆಗಿತ್ತು. ಮೇ 4ರಿಂದ ಒಂದು ವಾರ ಕಾರ್ಖಾನೆ ಶುರು ಮಾಡಿದರು. ಮತ್ತೆ ಮೇ 11ರಂದು ಕಾರ್ಖಾನೆ ಬಂದ್ ಮಾಡಿದ್ದಾರೆ. ಮಾರ್ಚ್ ತಿಂಗಳ 7 ದಿನದ ಸಂಬಳ ಹಾಗೂ ಏಪ್ರಿಲ್ ತಿಂಗಳ ಪೂರ್ಣ ಸಂಬಳ ನೀಡಿಲ್ಲ. ಇದರಿಂದಾಗಿ 110ಕ್ಕೂ ಹೆಚ್ಚು ಕಾರ್ಮಿಕರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದೇವೆ. ಕಂಪನಿಯಿಂದ ಬರಬೇಕಾದ ಸಂಬಳ ಹಾಗೂ ಬೋನಸ್, ಇತರ ಸೌಲಭ್ಯಗಳನ್ನು ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ಕಾರ್ಮಿಕರ ಯೂನಿಯನ್‌ನ ಪದಾಧಿಕಾರಿಗಳಾದ ದಾಕುಲ್ ಹಿರೋಜಿ, ಭರಮಾ ಗುಂಡಲಗುಟ್ಟಿ, ಪ್ರಶಾಂತ ಖಾಂಡೇಕರ, ಗೌತಮ್ ದೋನಜಿ ಇತರರಿದ್ದರು.

    ಮಹಿಳೆಯರ ಪ್ರತಿಭಟನೆ: ಲಾಕ್‌ಡೌನ್‌ನಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಅಲ್ಲದೆ, ಸರ್ಕಾರಿ ಯೋಜನೆಗಳೂ ಸಹ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಹೀಗಾಗಿ ಅಧಿಕಾರಿಗಳು ನಿಜವಾದ ಶ್ರಮಿಕ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ಕಾಗವಾಡ ತಾಲೂಕಿನ ಶೇಡಬಾಳ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.ಮಾದೇವಿ ಮಾಕಣ್ಣವರ, ಶೋಭಾ ಮುಂದೆ, ಸುರೇಖಾ ಯಂಕಟಪ್ಪಗೋಳ, ದುಂಡವ್ವ ಮುನ್ನೂರು, ಪಾರ್ವತಿ ಮಗದುಮ್ಮ, ಯಲ್ಲವ್ವ ನಾಯಕ, ಶಾಂತಾ ಕೌದಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts