More

    ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ದಿಟ್ಟ ಕ್ರಮ

    ಅಥಣಿ: ಜನರು ಹಾಗೂ ದೇಶದ ಅಭಿವೃದ್ಧಿಗೆ ಬದ್ಧರಾಗಿ ಕಾರ್ಯಯೋಜನೆ ರೂಪಿಸುತ್ತಿರುವ ಪ್ರಧಾನಿ ಮೋದಿಯವರ ದಿಟ್ಟ ಕ್ರಮ ಶ್ಲಾಘನೀಯ ಎಂದು ಶಾಸಕ ಮತ್ತು ಕೊಳೆಗೇರಿ ನಿರ್ಮೂಲನೆ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದ್ದಾರೆ.

    ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಅವಧಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಶನಿವಾರ ಕೇಂದ್ರದ ಕಾರ್ಯಗಳನ್ನು ಮನೆ ಮನೆಗೆ ತಿಳಿಸುವ ಮೋದಿ 2.0 ಮಹಾಸಂಪರ್ಕ ಅಭಿಯಾನಕ್ಕೆ ಶಿವಯೋಗಿ ನಗರದಲ್ಲಿ ಚಾಲನೆ ನೀಡಿ ಮಾತನಾಡಿದರು. ಮಾರಕ ಕರೊನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಿಸಿರುವುದರಿಂದ ಭಾರತದಲ್ಲಿ ಕರೊನಾ ಸೋಂಕು ನಿಯಂತ್ರಣದಲ್ಲಿದೆ. ಪ್ರತಿಯೊಬ್ಬರೂ ಕರೊನಾ ಸೋಂಕು ನಿವಾರಣೆಗೆ ಮುಂದಾಗಬೇಕು ಎಂದರು. ಜಿಪಂ ಸದಸ್ಯೆ ಶಕುಂತಲಾ ದಿವಾನಮಳ, ಮುಖಂಡರಾದ ಶಿವಾನಂದ ದಿವಾನಮಳ, ಶ್ರೀಶೈಲ ನಾಯಿಕ, ಸದಾಶಿವ ಕೊಂಪಿ, ರವಿ ಬಕಾರಿ, ಮಹಾದೇವ ಹಳ್ಳದಮಳ ಇತರರು ಇದ್ದರು.

    ತೆಲಸಂಗ ವರದಿ: ಕಳೆದ ವರ್ಷ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಗಿದ್ದು, ಪ್ರಧಾನಿ ಮೋದಿ ಅವರ ಕಾರ್ಯಗಳಿಂದ ಭಾರತ ಜಗತ್ತಿನಲ್ಲಿ ಕಂಗೊಳಿಸಲಾರಂಭಿಸಿದೆ ಎಂದು ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ, ವಕೀಲ ಅಮೋಘ ಖೊಬ್ರಿ ಹೇಳಿದರು. ಗ್ರಾಮದಲ್ಲಿ ಕೇಂದ್ರ ಸರ್ಕಾರಕ್ಕೆ ಒಂದು ವರ್ಷಗಳಾದ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಪ್ರಧಾನಿ ಮೋದಿ ಅವರು ಬರೆದ ಪತ್ರ ಮತ್ತು ಕೇಂದ್ರ ಸರ್ಕಾರದ ಸಾಧನೆಯ ಕರಪತ್ರ ಮನೆ ಮನೆಗೆ ಹಂಚುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಬಡವರಿಗೂ ಗೌರವ, ಹಣಕಾಸಿನ ಒಳಗೊಳ್ಳುವಿಕೆ, ಉಚಿತ ಅನಿಲ ಮತ್ತು ವಿದ್ಯುತ್ ಸಂಪರ್ಕ, ಎಲ್ಲರಿಗೂ ಸೂರು, ಒಂದು ತೆರಿಗೆ ಒಂದು ರಾಷ್ಟ್ರ, ರೈತರಿಗೆ ಬೆಂಬಲ ಬೆಲೆ ಇತರ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಜಗತ್ತಿನ ಮುಂದೆ ತನ್ನ ಶಕ್ತಿ ತೋರ್ಪಡಿಸಿದೆ ಎಂದರು.

    ಶ್ರೀಶೈಲ ಶೆಲ್ಲೆಪ್ಪಗೋಳ, ಡಾ. ಎಸ್.ಐ. ಇಂಚಗೇರಿ, ಡಾ. ಬಿ.ಎಸ್. ಕಾಮನ್, ಲಾಲಸಾಬ್ ಮುಜಾವರ, ಜಗದೀಶ ಮಠದ, ಸಹದೇವ ದಶವಂತ, ಶರಣಪ್ಪ ಅವಟಿ, ಮಲಕುಗೌಡ ಪಾಟೀಲ, ಸಿದ್ದಲಿಂಗ ಮಾದರ, ಮೌಲಾ ಮಡ್ಡಿಮನಿ, ಬಾಲಕೃಷ್ಣ ಬಡಿಗೇರ, ಬುರಾನ ಅರಟಾಳ, ಮಲ್ಲು ಪೂಜಾರಿ, ಅಶೋಕ ಶಿಂಧೆ, ಭೀಮು ಪೂಜಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts