More

    ದೇಶಕ್ಕೆ ಸಂತರ ಮಾರ್ಗದರ್ಶನ ಅಗತ್ಯ

    ಬೆಳಗಾವಿ: ಭಾರತ ಸರ್ವಶಕ್ತವಾಗಿ ಹೊರಹೊಮ್ಮಲು ಮತ್ತು ವಿಶ್ವಗುರುವಾಗಿ ಜಗತ್ತಿನ ನೇತೃತ್ವ ವಹಿಸಲು ಸಂತರ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಕನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.

    ನಗರದ ಕೆಎಲ್‌ಇ ಸಂಸ್ಥೆಯ ಜೀರಗೆ ಭವನದಲ್ಲಿ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಂತ ಸಮಾವೇಶದಲ್ಲಿ ಮಾತನಾಡಿದರು.
    ದೇಶಕ್ಕೆ ಸ್ವಾತಂತ್ರೃ ದೊರೆತ ಬಳಿಕ ಆಡಳಿತಕ್ಕೆ ಬಂದ ಸರ್ಕಾರಗಳು ದೇಶದ ಭವ್ಯತೆ ಸಾರುವ ಸಂಗತಿ ಮತ್ತೆ ಬಿತ್ತಿ ಭಾರತವನ್ನು ಉನ್ನತಿ ಸ್ಥಿತಿಗೆ ತೆಗೆದುಕೊಂಡು ಹೋಗಲಿಲ್ಲ. ಬದಲಾಗಿ ಜಾತ್ಯತೀತ ಎಂಬ ಹುಸಿ ಸಿದ್ಧಾಂತಕ್ಕೆ ಜೋತು ಬಿದ್ದಿದ್ದಾರೆ. ದೇಶವನ್ನು ಲೂಟಿ ಹೊಡೆದ ಖಿಲ್ಜಿ, ಮೊಘಲರು ಮತ್ತು ಸಾಕಷ್ಟು ಮಾಹಿತಿಗಳನ್ನು ಶೈಕ್ಷಣಿಕ ಪಠ್ಯದ ಮೂಲಕ ನೀಡಿರುವುದು ಭಾರತೀಯರಲ್ಲಿ ಗುಲಾಮ ಮನಸ್ಥಿತಿ ಬೇರೂರುವಂತೆ ಮಾಡಿದೆ ಎಂದರು.

    ನಿಡಸೋಸಿಯ ಪಂಚಮಲಿಂಗೇಶ್ವರ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದಗಿನ ಶಿವಾನಂದ ಸದಾಶಿವಾನಂದ ಸ್ವಾಮೀಜಿ, ರಾಯಬಾಗದ ಅಮರೇಶ್ವರ ಮಹಾರಾಜರು, ನಿಲಜಿಯ ಅಲೌಕಿಕ ಜ್ಞಾನ ಮಂದಿರದ ಶಿವಾನಂದ ಗುರೂಜಿ, ವಿಎಚ್‌ಪಿಯ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ
    ರಾಘವೇಂದ್ರ ಕಾಗವಾಡ, ಶ್ರೀರಾಮ ಜನ್ಮಭೂಮಿ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕರ್ನಾಟಕ ಉತ್ತರ ಪ್ರಾಂತ ಸಹ ಪ್ರಮುಖ ಮನೋಹರ ಮಠದ, ಕೃಷ್ಣ ಭಟ್, ಚಿಕ್ಕೋಡಿ ಜಿಲ್ಲಾಧ್ಯಕ್ಷ ಆರ್.ಕೆ. ಬಾಗಿ, ಬೆಳಗಾವಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts