More

    ಮಳೆ ತಗ್ಗಿದ್ದು ಜನರು ಊಹಾಪೋಹಗಳಿಗೆ ಕಿವಿಗೊಡದಿರಿ – ಎನ್.ಬಿ.ಗೆಜ್ಜೆ

    ಬಾವನಸೌಂದತ್ತಿ: ಕೃಷ್ಣಾ ನದಿಗೆ ಪ್ರವಾಹ ಬಂದರೆ ಅದನ್ನು ಎದುರಿಸಲು ತಾಲೂಕಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೆರೆ ಸಂತ್ರಸ್ತರಿಗಾಗಿ ಕಾಳಜಿಕೇಂದ್ರ ಹಾಗೂ ಬೋಟ್‌ನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎನ್.ಬಿ.ಗೆಜ್ಜೆ ಮಾಹಿತಿ ನೀಡಿದ್ದಾರೆ.

    ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬಾವನಸೌಂದತ್ತಿ ಗ್ರಾಮದ ನದಿ ದಡಕ್ಕೆ ಭೇಟಿ ನೀಡಿ ಮಾತನಾಡಿ, ಕೃಷ್ಣಾ ನದಿಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರೂ ಜನ ಆತಂಕಕ್ಕೆ ಒಳಗಾಗುವ ಮಟ್ಟಕ್ಕೆ ನೀರು ಬಂದಿಲ್ಲ.

    ಸದ್ಯ ಮಹಾರಾಷ್ಟ್ರ ಮತ್ತು ರಾಯಬಾಗ ತಾಲೂಕಿನಲ್ಲಿ ಮಳೆ ತಗ್ಗಿದ್ದು ಜನರು ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು. ಪಿಡಿಒ ಎಸ್.ಆರ್.ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಪತ್ತಾರ, ಗ್ರಾಪಂ ಅಧ್ಯಕ್ಷ ಅಜಿತ ಖೇಮಲಾಪುರೆ, ಅನಿಲ ಹಂಜೆ, ಜಿ.ಎಚ್.ಸಸಾಲಟ್ಟಿ, ಎಸ್‌ಒ ಎಂ.ಡಿ.ಪಾಟೀಲ ಇದ್ದರು.

    ಟಿಸಿ ಸಂಪರ್ಕ ಕಡಿತಕ್ಕೆ ಸೂಚನೆ: ಮುಳುಗುವ ಸ್ಥಿತಿಯಲ್ಲಿರುವ ಟಿಸಿಗಳಿಗೆ ವಿದ್ಯುತ್ ಸಂಪರ್ಕ ನಿಲುಗಡೆ ಮಾಡಲು ಹೆಸ್ಕಾಂ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ರಾಯಬಾಗ ಹೆಸ್ಕಾಂ ಅಧಿಕಾರಿ ನಾಗರಾಜ ಯಳಕರ್ ಹೇಳಿದ್ದಾರೆ. ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಕೃಷ್ಣಾ ನದಿ ತೀರದಲ್ಲಿರುವ ವಿದ್ಯುತ್ ಟಿಸಿ ಪರಿಶೀಲಿಸಿ ಮಾತನಾಡಿದ ಅವರು, ನದಿ ನೀರಿನ ಪ್ರಮಾಣ ಏರಿಕೆಯಾದರೆ ಗ್ರಾಮದ ಸುಮಾರು 150 ಟಿಸಿ ಮುಳುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಟಿಸಿ ಮುಳುಗುತ್ತಿರುವ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು. ಎಸ್‌ಒ ಎಂ.ಡಿ.ಪಾಟೀಲ, ಶೇಖರ ಚವ್ಹಾಣ, ಸಿದ್ದಯ್ಯ ಹಿರೇಮಠ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts