More

    ಬಡಜನರಿಗೆ ಸಹಾಯವಾಣಿ ಆರಂಭ

    ನಿಪ್ಪಾಣಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರ ಸಹಾಯಕ್ಕಾಗಿ ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಹಾಯವಾಣಿ ಆರಂಭಿಸಿದ್ದಾರೆ. ಹೊಲದಲ್ಲಿ ಬೆಳೆ ನಾಶವಾಗುತ್ತಿದ್ದಲ್ಲಿ ಅಂತಹವರು ಮಠಕ್ಕೆ ಕರೆ ಮಾಡಿದರೆ ಅದನ್ನು ತಂದು ಬಡವರಿಗೆ ವಿತರಿಸಲಾಗುತ್ತಿದೆ. ಸಹಾಯವಾಣಿಗೆ ತಾಲೂಕಿನ ರೈತರು ಸ್ಪಂದಿಸುತ್ತಿದ್ದು ಬೂದಿಹಾಳ ಗ್ರಾಮದ ರಾಜೇಂದ್ರ ಕುಲಕರ್ಣಿ,

    ಡಾ.ಬಾಳಕೃಷ್ಣ ಪವಾರ, ಗಜಾನನ ಪಾಟೀಲ ಅವರ ಹೊಲದಲ್ಲಿನ ಸುಮಾರು 1,000 ಕೆಜಿ ಟೊಮ್ಯಾಟೊ, ಹಂಚನಾಳ
    \(ಕೆ.ಎಸ್.)ದ ಅನಿಲ ಕುರಣೆ, ಅಣ್ಣಾಸಾಹೇಬ ವಾಣಿ ಅವರು 2,000 ಕೆಜಿ ಕ್ಯಾಪ್ಸಿಕಂನ್ನು ಪ್ರಾಣಲಿಂಗ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ. ಆರ್‌ಎಸ್‌ಎಸ್, ಶ್ರೀರಾಮ ಸೇನೆ, ವಿಶ್ವ ಹಿಂದು ಪರಿಷತ್, ಬಜರಂಗ ದಳ, ಸನಾತನ ಸಂಸ್ಥೆ, ಶಿವಪ್ರತಿಷ್ಠಾನ ಸಂಸ್ಥೆ ಸೇರಿ ಮಠದ ಭಕ್ತರು ಸಹಕರಿಸುತ್ತಿದ್ದಾರೆ.

    ಸಹಾಯವಾಣಿ ನಗರ ಘಟಕದ ಪ್ರಮುಖ ಸಾಗರ ಶ್ರೀಖಂಡೆ ಮಾತನಾಡಿ, ಸಹಾಯ ಮಾಡಬಯಸುವವರು ಮತ್ತು ಸಹಾಯ ಬೇಕಾದವರು ಮೊಬೈಲ್ ಸಂ.9611971655/9743840850ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಮಠದ ಚೇರ್ಮನ್ ಸುರೇಶ ಶೆಟ್ಟಿ, ವಜ್ರಕಾಂತ ಸದಲಗೆ, ಮಹಾವೀರ ಬೋರಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts