More

    ಬಡಜನರಿಗೆ ಸರ್ಕಾರದ ಸೌಲಭ್ಯ ದೊರಕಲಿ

    ನೇಸರಗಿ: ಬಡಜನರಿಗೆ ಸರ್ಕಾರದ ಸೌಲಭ್ಯ ದೊರೆಯುವಂತಾಗಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

    ಸಮೀಪದ ಹೊಸಕೋಟಿ ಗ್ರಾಮದ ಸರ್ಕಾರಿ ಪರಿಶಿಷ್ಟ ವರ್ಗಗಳ ವಾಲ್ಮೀಕಿ ಆಶ್ರಮ ಶಾಲೆಯ ಸಭಾಭವನದಲ್ಲಿ ಕಂದಾಯ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಸಂಪರ್ಕ, ಪಿಂಚಣಿ ಅದಾಲತ್ ಉದ್ದೇಶಿಸಿ ಮಾತನಾಡಿದರು. ಜನಸಂಪರ್ಕ ಸಭೆ ಹಮ್ಮಿಕೊಳ್ಳುವುದರಿಂದ ತಾಲೂಕುಮಟ್ಟದ ಅಧಿಕಾರಿಗಳು ನಿಮ್ಮ ಬಳಿ ಬಂದುಕುಂದು-ಕೊರತೆ ಆಲಿಸುತ್ತಾರೆ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಬೈಲಹೊಂಗಲ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಬಂದಿದ್ದು, ಪಿಂಚಣಿ, ವಿಧವಾ ವೇತನ ಮುಂತಾದ ಸೌಲಭ್ಯ ದೊರಕುವಂತೆ ಮಾಡುವುದೇ ಜನಸಂಪರ್ಕ ಸಭೆಯ ಉದ್ದೇಶ ಎಂದರು.

    ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ತಾಪಂ ಎಒ ಸುಭಾಷ ಸಂಪಗಾಂವಿ, ಗ್ರೇಡ್-2 ತಹಸೀಲ್ದಾರ್ ಜೆ.ಸಿ.ಅಷ್ಟಗಿಮಠ, ನೇಸರಗಿ ಪಿಐ ರಾಘವೇಂದ್ರ ಹವಾಲ್ದಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಬಿ.ಯಮನೂರ, ಗ್ರಾಪಂ ಅಧ್ಯಕ್ಷೆ ಸುವರ್ಣಾ ಉಳವಿ, ಉಪತಹಸೀಲ್ದಾರ್ ಬಸವರಾಜ ಹುಬ್ಬಳ್ಳಿ, ಕಂದಾಯ ನಿರೀಕ್ಷಕ ಬಸವರಾಜ ಬೋರಗಲ್ಲ, ಶಿವನಗೌಡ ಪಾಟೀಲ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಹಾಸ್ಟೆಲ್ ವಾರ್ಡನ್ ಆರ್.ಬಿ.ರೊಳ್ಳಿ, ಮುಖ್ಯ ಶಿಕ್ಷಕಿ ವಿದ್ಯಾ ದೊಡಮನಿ, ಈರಣ್ಣ ಕಿಂದ್ರಿ, ಜಗದೀಶ ಗೌಡರ, ಶಿವಾನಂದ ಕರಿಗಾರ, ರಾಮಚಂದ್ರ ನಾಯ್ಕ, ಪಿಡಿಒ ಶಿವಾನಂದ ಕಲ್ಲೂರ, ಸದಾನಂದ ಖೋದಾನಪುರ, ಗ್ರಾಪಂ ಸದಸ್ಯೆ ಚೈತ್ರಾ ಖೋದಾನಪುರ, ಲಕ್ಷ್ಮಣ ಮಾರಿಹಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts