More

    ಜನರಗೆ ಸೇವೆ ಸಲ್ಲಿಸದ ಆರೋಗ್ಯ ಕೇಂದ್ರ

    ಹನುಮಸಾಗರ: ಪಟ್ಟಣದಲ್ಲಿ ನಿರ್ಮಿಸಿರುವ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಯಾದರು ಸಾರ್ವಜನಿಕ ಬಳಕೆಯಿಲ್ಲ. ಈಗಾಗಿ ಗುಣಮಟ್ಟದ ಚಿಕಿತ್ಸೆಗೆ ಜನರು ಬೇರೆಡೆ ಅಲೆಯುವುದು ಅನಿವಾರ್ಯವಾಗಿದೆ.

    ಇದನ್ನೂ ಓದಿ: ಆರೋಗ್ಯ ಶಿಕ್ಷಣದಿಂದ ಏಡ್ಸ್ ನಿಯಂತ್ರಣ

    ಹನುಮಸಾಗರ ಸೇರಿ ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗಲೆಂದು ಎಚ್‌ಎಸ್‌ಡಿಆರ್‌ಸಿ ಯೋಜನೆಯಡಿಯಲ್ಲಿ 1 ಕೋಟಿ 80 ಲಕ್ಷ ರೂ.ಅನುದಾನದಲ್ಲಿ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗಿದೆ.

    ಕಟ್ಟಡ ನಿರ್ಮಾಣವಾಗಿದ್ದರು ಉದ್ಘಾಟನೆ ಮುಂದುಡುತ್ತಿದ್ದರು. 2020ರ ಎಪ್ರಿಲ್ನಲ್ಲಿ ಉದ್ಘಾಟನೆಗೆ ಸಿದ್ದತೆ ಮಡಲಾಗಿತ್ತು. ಆದರೆ, ಕೋವಿಡ್-19ನಿಂದ ಮುಂದುಡಲಾಗಿತ್ತು. ನಂತರ 2022ರ ಅಗಸ್ಟ್ ಒಂದರಂದು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು.

    ಅದರೆ, ಇಲ್ಲಿಯವರೆಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡುತ್ತಿಲ್ಲ. ಇದರಿಂದಾಗಿ ಸ್ಥಳೀಯರು ಹಾಗೂ ಸುತ್ತ್ತಲಿನ ಗ್ರಾಮಸ್ಥರು ಚಿಕಿತ್ಸೆಗಾಗಿ ತಾಲೂಕಾ ಕೇಂದ್ರ ಕುಷ್ಟಗಿ, ಗಜೇಂದ್ರಗಡ, ಬಾಗಲಕೋಟೆ, ಬಾದಾಮಿ, ಇಲಕಲ್ ಪಟ್ಟಣಕ್ಕೆ ಹೋಗಬೇಕಾಗಿದೆ.

    90ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಅನುಕೂಲ:
    ಹನುಮಸಾಗರ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿಲ್ಲ. ಹನುಮಸಾಗರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪ್ರಾರಂಭ ಮಾಡಿದರೆ ಹಿರೇಗೊಣ್ಣಾಗರ, ಮಾಲಗಿತ್ತಿ, ಹನುಮನಾಳ, ಹೂಲಗೇರಿ ಹಾಗೂ ಚಳಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ಸುಮಾರು 90ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.
    
    ಬೇಕಾಗುವ ಸಿಬ್ಬಂದಿಗಳು:
    ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ ವೈದ್ಯರು, ಡೆಫಿನೇಶನ್ ಮೇಲೆ ಗ್ರೂಪ್ ಡಿ, 3 ಸ್ಟಾಫ್ ನರ್ಸ್, ಔಷಧ ವಿತರಕರು, ಪ್ರಯೋಗ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೆಡಿಕಲ್ ಆಫೀಸರ್, ದಂತ ವೈದ್ಯರು, ಎಲ್ಸಿಡಿ ವೈದ್ಯರು, ಮಹಿಳಾ ವೈದ್ಯರು, ಆಯುಷ್ಯ ವೈದ್ಯರು, 10 ರಿಂದ 12 ಜನ ಸ್ಟಾಫ್ ನರ್ಸ್, 10 ಗ್ರೂಪ್ ಡಿ ನೌಕರರು ಬೇಕಾಗಿದ್ದಾರೆ.

    ಸಮುದಾಯ ಆರೋಗ್ಯ ಕೇಂದ್ರ ಸೇವೆ ನೀಡದಿದ್ದರಿಂದ ಚಿಕಿತ್ಸೆಗಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಗುಣಮಟ್ಟ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಅನ್ಯ ಜಿಲ್ಲೆಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ. ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಸಮುದಾಯ ಆರೋಗ್ಯ ಕೇಂದ್ರವಿದ್ದರು ಜನರು ಪರದಾಡುವುದು ತಪ್ಪಿಲ್ಲ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮೂದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸಿ, ಆಸ್ಪತ್ರೆ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
    ತಿಪ್ಪಣ್ಣ ಕಬ್ಬರಗಿ, ಹನುಮಸಾಗರ ನಿವಾಸಿ.

    ಸಮೂದಾಯ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್ ವೈದ್ಯರು ಸೇರಿ ಬೇಕಾದ ವಿವಿಧ ಹುದ್ದೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಹುದ್ದೆಗಳು ಮಂಜೂರಾದ ಕೂಡಲೇ ಸಮೂದಾಯ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗುವುದು.
    ಡಾ.ಟಿ.ಲಿಂಗರಾಜ, ಡಿಎಚ್‌ಒ ಕೊಪ್ಪಳ.

    ಹನುಮಸಾಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಗಳನ್ನು ಒದಗಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಹಣಕಾಸು ಇಲಾಖೆಯಲ್ಲಿ ಆ ಫೈಲ್ ಬಾಕಿ ಇದೆ. ಸರ್ಕಾರ ಯಾವಾಗ ಅಗತ್ಯ ಕ್ರಮ ಕೈಗೊಳ್ಳುತ್ತದೇಯೋ ಹೇಳಲಾಗದು.
    ಎಚ್.ದೊಡ್ಡನಗೌಡ ಪಾಟೀಲ್, ಕುಷ್ಟಗಿ ಶಾಸಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts