More

    ಪರರಿಗೆ ಒಳಿತು ಮಾಡುವ ಮನೋಭಾವ ಬೆಳೆಸಿಕೊಳ್ಳಿ: ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜ ಆಶೀರ್ವಚನ

    ಯಲಬುರ್ಗಾ: ಮನುಷ್ಯ ಪರೋಪಕಾರ ಗುಣ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜ ಹೇಳಿದರು.


    ತಾಲೂಕಿನ ಕಲ್ಲೂರಿನಲ್ಲಿ ಶ್ರೀ ಕಲ್ಲಿನಾಥೇಶ್ವರ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ತುಲಾಭಾರ, ಸಾಂಸ್ಕೃತಿ ಕಾರ್ಯಕ್ರಮ ಮತ್ತು ನಾನಾ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.


    ಮನುಷ್ಯ ದ್ವೇಷ, ಅಸೂಯೆ ಮತ್ತು ಕೆಟ್ಟ ವಿಚಾರ ದೂರವಿಟ್ಟು ಪರರಿಗೆ ಒಳಿತು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಧಿಕಾರ ಮತ್ತು ಹಣದ ಆಸೆಗಾಗಿ ಮಾನವೀಯ ಮೌಲ್ಯಗಳು ದೂರವಾಗುತ್ತಿರುವುದು ಕಳವಳಕಾರಿ ಸಂಗತಿ. ಕಲ್ಲೂರು ಐತಿಹಾಸಿಕ ಪುಣ್ಯಕ್ಷೇತ್ರವಾಗಿದ್ದು, ಸರ್ವ ಜನರ ಭಕ್ತಿಯ ತಾಣವಾಗಿದೆ. ಕಲ್ಲಿನಾಥೇಶ್ವರ ಮಹಿಮೆ ನಾಡಿನಾದ್ಯಂತ ಪಸರಿಸಿದೆ. ಪ್ರತಿ ವರ್ಷವೂ ಕಾರ್ತಿಕೋತ್ಸವ ಪ್ರಯುಕ್ತ ನಡೆಯುವ ದೀಪೋತ್ಸವ ಇದಕ್ಕೆ ಸಾಕ್ಷಿಯಾಗಿದೆ ಎಂದರು.


    ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಡಾ.ಮಹಾದೇವ ಸ್ವಾಮೀಜಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಳಕನಗೌಡ ಪಾಟೀಲ್ ಮಾತನಾಡಿದರು. ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಲಿನಾಥೇಶ್ವರ ದೇವಸ್ಥಾನ ಆವರಣದಲ್ಲಿ ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವ ಸಂಭ್ರಮದಿಂದ ಆಚರಿಸಲಾಯಿತು.


    ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ, ಪ್ರಮುಖರಾದ ವಿ.ಎಸ್.ಭೂಸನೂರಮಠ, ಹೇಮರಾಜಶಾಸ್ತ್ರಿ, ವೀರಯ್ಯ ಸಂಗನಾಳಮಠ, ವರದಯ್ಯ ಹಿರೇಮಠ, ದೊಡ್ಡಯ್ಯ ಹಿರೇಮಠ, ಮಾನಪ್ಪ ಪತ್ತಾರ, ಪ್ರಭಯ್ಯಶಾಸ್ತ್ರಿ, ಮಂಜುನಾಥ ಸುಣಗಾರ, ಕಲ್ಲಪ್ಪ ತಳವಾರ್, ಗ್ರಾಮ ಆಡಳಿತಾಧಿಕಾರಿಗಳಾದ ಮಾರುತಿ ಪೂಜಾರ, ದೇವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts