More

    ವೈದ್ಯರೇ ವೃತ್ತಿಯಲ್ಲಿ ಸೇವಾ ಮನೋಭಾವ ರೂಢಿಸಿಕೊಳ್ಳಿ

    ಮಾಂಜರಿ: ವೈದ್ಯಕೀಯ ವಿದ್ಯಾರ್ಥಿಗಳು ಸಮಾಜದಲ್ಲಿ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಆಮಿಷಗಳಿಗೆ ಬಲಿಯಾಗದೆ ನಿಸ್ವಾರ್ಥ ಸೇವೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.

    ಸಮೀಪದ ಅಂಕಲಿ ಗ್ರಾಮದ ಶ್ರೀ ಗೊಮಟೇಶ್ ಶಿಕ್ಷಣ ಸಂಸ್ಥೆಯ ಡಾ.ಎನ್.ಎ. ಮಗದುಮ್ಮ ಆಯುರ್ವೇದಿಕ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ದ್ವಿತೀಯ ಬ್ಯಾಚ್‌ನ ಬಿಎಎಂಎಸ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಡಾ.ಎನ್.ಎ. ಮಗದುಮ್ಮ ಅವರು ಸಂಸ್ಥೆಯ ಕೀರ್ತಿ ಹೆಚ್ಚಿಸುತ್ತಿದ್ದು, ಅವರ ಯೋಜನೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

    ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಎ. ಮಗದುಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಆಯುರ್ವೇದದ ಮಹತ್ವ ಹೆಚ್ಚಾಗುತ್ತಿದೆ. ಇದರಿಂದ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಆಸ್ಥೆ ವಹಿಸಿ ಮುಂದುವರಿಸಬೇಕು. ತಾವು ಮುಂದುವರಿಯುವ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಲು ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಯುವ ಮುಖಂಡ ಅಮಿತ ಘಾಟಗೆ ಮಾತನಾಡಿ, ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಗೌರವಿಸಿ, ಸಮಾಜದಲ್ಲಿ ಕೆಲಸ ಮಾಡಬೇಕು ಎಂದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮತ್ತು ಅಮಿತ ಘಾಟಗೆ ಪದವಿ ಪ್ರದಾನ ಮಾಡಿದರು. ವಿವಿಧ ಗಣ್ಯರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶ್ರೀದೇವಿ ಪಿರಾಜೆ ಪಾಟೀಲ ಅತ್ಯುತ್ತಮ ವಿದ್ಯಾರ್ಥಿನಿ ಪುರಸ್ಕಾರ ಪಡೆದುಕೊಂಡರು. ಡಾ.ಎಸ್.ವಿ. ಗಡ್ಡಿಹಳ್ಳಿಶೆಟ್ಟಿ, ಪಂಕಜ ಪಾಟೀಲ, ಮಹಾವೀರ ಮೋಹಿತೆ, ಸಂಸ್ಥೆಯ ಕೋಶಾಧಿಕಾರಿ ಲಲಿತಾ ಮಗದುಮ್ಮ, ಕಾರ್ಯದರ್ಶಿ ಸುರೇಶ ಚೌಗುಲೆ, ನಿರ್ದೇಶಕ ಅಜಿತ ರಾವಳ, ಪ್ರಾಚಾರ್ಯ ಡಾ.ರಮೇಶ ಕೋಣಕೆರಿ, ಡಾ.ವಿವೇಕ್ ಸೋಲಾಪುರಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts