More

  ಅಭಿವೃದ್ಧಿಗೆ ಸಿಗುತ್ತಿದೆ ಅನುದಾನ

  ಅಥಣಿ ಗ್ರಾಮೀಣ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಥಣಿ ಕ್ಷೇತ್ರದ ನದಿ ದಡ ಹಾಗೂ ಪೂರ್ವಭಾಗದ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

  ಅಥಣಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ಹೊಸಟ್ಟಿ ರಸ್ತೆಯಿಂದ ನಾಯಕ ತೋಟದವರೆಗೆ 1 ಕೋಟಿ ರೂ. ವೆಚ್ಚದಲ್ಲಿ 2 ಕಿಮೀ ಹಾಗೂ ದರೂರ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ, ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲು ಶ್ರಮಿಸುತ್ತಿದ್ದೇನೆ.

  ಹದಗೆಟ್ಟಿರುವ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ಸೂಕ್ತವಾಗಿ ಹಂಚಿಕೆ ಮಾಡಿ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯರು ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ಕಾಳಜಿ ವಹಿಸಬೇಕು. ಕ್ಷೇತ್ರದ ಯಾವುದೇ ಹಳ್ಳಿಯ ಜನರು ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು. ಶ್ರೀಶೈಲ ನಾಯಿಕ, ಸುರೇಶ ಮಾಯಣ್ಣವರ, ಮಹಾದೇವ ಬಸಗೌಡರ, ಶಿವಾನಂದ ದಿವಾನಮಳ, ಶಿವಪುತ್ರ ನಾಯಿಕ,

  ರಾಜು ಮರಡಿ, ಮಹಾದೇವ ಚಿಮ್ಮಡ, ಸಂಜು ಮದಬಾವಿ, ಜಗದೀಶ ದಳವಾಯಿ, ಗುರುಲಿಂಗ ಮಮತಾಜ, ಭೀಮಪ್ಪ ಪಡಸಲಗಿ, ಕುಮಾರ ಬರಲಿ, ಮಹಾದೇವ ಚಿಮ್ಮಡ, ಶಂಕರ ಮರಡಿ, ಸುನೀಲ ಅಪರಾಜ, ಸಂಜು ಹಣಮಾಪುರೆ, ರಾಮು ಬರಲಿ ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts