More

    ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆ ಅಗತ್ಯ: ಧಾತ್ರಿ ರಂಗ ಸಂಸ್ಥೆ ಕಾರ್ಯದರ್ಶಿ ವೈ.ಮಂಜುನಾಥ್ ಹೇಳಿಕೆ

    ಸಿರಿಗೇರಿ: ಮಕ್ಕಳಿಗೆ ಬೇಸಿಗೆ ಶಿಬಿರದಿಂದ ಕ್ರಿಯಾಶೀಲ ಚಟುವಟಿಕೆಗಳ ಅರಿವು ಮೂಡಲಿದೆ ಎಂದು ಧಾತ್ರಿ ರಂಗ ಸಂಸ್ಥೆಯ ಕಾರ್ಯದರ್ಶಿ ವೈ.ಮಂಜುನಾಥ್ ಹೇಳಿದರು.

    ಶಿಬಿರದ 25 ದಿನಗಳಲ್ಲಿ ಮಕ್ಕಳು ಜ್ಞಾನ ಹೆಚ್ಚಿಸಿಕೊಂಡಿದ್ದಾರೆ

    ಗ್ರಾಮದ ಜೆ.ಎಚ್.ವಿ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾತ್ರಿ ರಂಗ ಸಂಸ್ಥೆ ಆಯೋಜಿಸಿದ್ದ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಶಿಬಿರದ 25 ದಿನಗಳಲ್ಲಿ ಮಕ್ಕಳು ಜ್ಞಾನ ಹೆಚ್ಚಿಸಿಕೊಂಡಿದ್ದಾರೆ. ಪಾಲಕರು ಮಕ್ಕಳನ್ನು ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ತೊಡಗಿಸಬೇಕು ಎಂದರು.


    ಇದನ್ನೂ ಓದಿ: ಮಾತೃಭಾಷೆಯಲ್ಲೇ ಮಕ್ಕಳಿಗೆ ಕಲಿಕೆ ಅಗತ್ಯ

    ಗ್ರಾಪಂ ಉಪಾಧ್ಯಕ್ಷ ಭಜಂತ್ರಿ ರಮೇಶ್ ಮಾತನಾಡಿ, ಬೇಸಿಗೆ ಶಿಬಿರದಿಂದ ಮಕ್ಕಳ ಭವಿಷ್ಯ ಉಜ್ವಲವಾಗಲು ಪ್ರೇರೇಪಿಸಲಿದೆ ಎಂದು ಹೇಳಿದರು. ಧಾತ್ರಿ ರಂಗ ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ ಮಾತನಾಡಿದರು.

    ವಿವಿಧ ನಾಟಕಗಳು ಪ್ರದರ್ಶನ

    ಸವಿತಾ ಗಣೇಶ್, ವೈ.ರಾಜಶೇಖರ್, ಪರಶುರಾಮ್ ಗುಡಳ್ಳಿ ನಿರ್ದೇಶನದಲ್ಲಿ ಕತ್ತಲೆ ನಗರಿಯ ತಲೆಕೆಟ್ಟ ರಾಜ, ಕಂಸಾಳೆ ನೃತ್ಯ, ಏಳು ಮಂದಿ ಅಣ್ಣ ತಮ್ಮಂದಿರು ಎಂಬ ನಾಟಕಗಳು ಪ್ರದರ್ಶನಗೊಂಡವು. ಪ್ರಮುಖರಾದ ಜೆ.ದೊಡ್ಡನಗೌಡ್ರು, ನಿವೃತ್ತ ವೈದ್ಯಾಧಿಕಾರಿ ಟಿ.ಮೃತ್ಯುಂಜಯ ಸ್ವಾಮಿ, ಗೋಡೆ ಹೇಮಾವತಿ, ಟಿ.ಗುರುದೇವ, ರಂಗ ನಿರ್ದೇಶಕರಾದ ನವೀನ್ ಪ್ರತಾಪ್ ಚನ್ನಗಿರಿ, ರುದ್ರೇಶ್ ಬಳಿಗಾರ್, ಗ್ರಾಪಂ ಸದಸ್ಯ ಗೋಡೆ ಚಿನ್ನಪ್ಪ, ಹೊಸಪೇಟೆಯ ಇನ್ಸಾಫ್.ಪಿ.ಭೀಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts