More

    ಮಾತೃಭಾಷೆಯಲ್ಲೇ ಮಕ್ಕಳಿಗೆ ಕಲಿಕೆ ಅಗತ್ಯ

    ಸೋಮವಾರಪೇಟೆ: ಮಾತೃಭಾಷೆಯಲ್ಲೇ ಮಕ್ಕಳು ಶಿಕ್ಷಣ ಕಲಿಯಬೇಕು. ಆಗ ಮಾತ್ರ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.


    ಸೋಮವಾರಪೇಟೆ ಹಿಂದು ಮಲಯಾಳ ಸಮಾಜದ ವತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಓಣಂ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


    ಮಾತೃಭಾಷೆಯಲ್ಲೇ ಮಕ್ಕಳ ಶಿಕ್ಷಣ ಆದರೆ ಆ ಭಾಷೆಯ ಸೊಗಡು ಮತ್ತು ಆ ನೆಲದ ಸಂಸ್ಕೃತಿಯ ಗುಣಗಳೂ ಪ್ರತಿಯೊಬ್ಬರಿಗೂ ತಿಳಿಯಲು ಸಾಧ್ಯ. ಆಯಾ ಪ್ರದೇಶದ ಸಂಸ್ಕೃತಿ, ಜನಜೀವನ, ಭಾಷೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದರು.


    ಹಿಂದು ಮಲಯಾಳ ಸಮಾಜದ ಅಧ್ಯಕ್ಷ ವಿ.ಎಂ.ವಿಜಯ ಅಧ್ಯಕ್ಷತೆ ವಹಿಸಿದ್ದರು. ಓಣಂ ಉತ್ಸವ ಸಮಿತಿ ಅಧ್ಯಕ್ಷರಾದ ಪಿ.ಡಿ.ಪ್ರಕಾಶ್, ಮಡಿಕೇರಿ ತಾಲೂಕು ಘಟಕದ ಎಸ್.ಎನ್.ಡಿ.ಪಿ.ಅಧ್ಯಕ್ಷ ಟಿ.ಆರ್.ವಾಸುದೇವ್, ಸಮಿತಿಯ ಎಲ್ಲಾ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts