More

    ಶತಮಾನೋತ್ಸವಕ್ಕೆ ಸಹಕಾರ ಅಗತ್ಯ

    ಅಥಣಿ: ಮುಂದಿನ ವರ್ಷ ಲಿಂ.ಚನ್ನಬಸವ ಶಿವಯೋಗಿಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಮಾದರಿಯಾಗಿ ಆಚರಿಸಲು ಭಕ್ತರ ಸಹಕಾರ ಅಗತ್ಯ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.

    ಪಟ್ಟಣದ ಮೋಟಗಿಮಠದ ಲಿಂ.ಚನ್ನಬಸವ ಶಿವಯೋಗಿಗಳ 99ನೇ ಸ್ಮರಣೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪೂಜ್ಯರ ಭಾವಚಿತ್ರ ಮತ್ತು ಪಲ್ಲಕ್ಕಿ ಉತ್ಸವದ ನೇತೃತ್ವವಹಿಸಿ ಮಾತನಾಡಿ, ಬಸವಾದಿ ಶಿವಶರಣರ ವಚನ ಸಾಹಿತ್ಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ ಬೇಕು. ಪ್ರತಿ ಮನೆಯಲ್ಲೂ ವಚನ ಸಾಹಿತ್ಯವನ್ನು ತಿಳಿಪಡಿಸುವ ಉದ್ದೇಶವೇ ಶರಣ ಸಂಸ್ಕೃತಿ ಗಡಿನಾಡ ನುಡಿಹಬ್ಬದ ಆಶಯವಾಗಿದೆ ಎಂದರು.

    ಪಲ್ಲಕ್ಕಿ ಉತ್ಸವ: ಶ್ರೀಮಠದ ಚನ್ನಬಸವ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಸವಾದಿ ಶಿವಶರಣರ ಹಾಗೂ ಪೂಜ್ಯರ ಭಾವಚಿತ್ರ-ಮಹಾಮೂರ್ತಿಯನ್ನಿಟ್ಟು ಪಲ್ಲಕ್ಕಿ ಉತ್ಸವು ಸಕಲ ವಾದ್ಯವೃಂದಗಳೊಂದಿಗೆ ಬಸವ ಜಯ ಘೋಷಗಳೊಂದಿಗೆ ಜರುಗಿತು.

    ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ಕಾಶಿನಾಥ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ವಿರೇಶ್ವರ ದೇವರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts