More

    ವ್ಯಾಪಾರಸ್ಥರಿಗೆ ಪುರಸಭೆಯಿಂದ ಪಾಸ್

    ಅಥಣಿ: ಪಟ್ಟಣದಲ್ಲಿ ಜನ ಸಾಮಾನ್ಯರಿಗೆ ನಿತ್ಯ ಬಳಸುವ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳಲು ಅನುಕೂಲವಾಗಲು ವ್ಯಾಪಾರಸ್ಥರಿಗೆ ಪುರಸಭೆ ವತಿಯಿಂದ ಗುರುತಿನ ಚೀಟಿ ನೀಡಲು ನಿರ್ಧರಿಸಲಾಗಿದೆ.

    ಪಾಸ್ ನೀಡುವ ವಿಷಯ ತಿಳಿದ ಪಟ್ಟಣದ ಎಲ್ಲ ವ್ಯಾಪಾರಸ್ಥರು ಪುರಸಭೆ ಆವರಣದಲ್ಲಿ ಸೇರಿದ್ದರು. ಆದರೆ, ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದರಿಂದ ಜನದಟ್ಟಣೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಎನ್. ಗಿರೀಶ ವ್ಯಾಪಾರಸ್ಥರನ್ನು ಚದುರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಪುರಸಭೆಯಿಂದ ಪಾಸ್ ಕೊಡಲಾಗುತ್ತಿದೆ. ಅದನ್ನು ಪಡೆದು ಬೇಕಾಬಿಟ್ಟಿಯಾಗಿ ಆಹಾರ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕೌಲಾಪುರ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ಮಾತನಾಡಿ, ರಿಯಾಯಿತಿ (ಹೋಲ್ ಸೇಲ್) ದರದಲ್ಲಿ ಮಾರಾಟ ಮಾಡುವ ಅಂಗಡಿಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಹಾಗೂ ಚಿಲ್ಲರೆ ವ್ಯಾಪಾರಸ್ಥರು ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ವ್ಯಾಪಾರ ಮಾಡುವಂತೆ ಮತ್ತು ತರಕಾರಿ ವ್ಯಾಪಾರಸ್ಥರಿಗೂ ಪಾಸ್ ವಿತರಿಸಲಾಗುವುದು. ವಾರ್ಡ್‌ಗಳಿಗೆ ಹೋಗಿ ತರಕಾರಿ ನೀಡಿದರೆ ಹೆಚ್ಚು ಉಪಯುಕ್ತವಾಗುತ್ತದೆ. ಇದರಿಂದ ಎಲ್ಲರೂ ಒಂದೆಡೆ ಸೇರುವುದನ್ನು ತಪ್ಪಿಸಲು ಸಾಧ್ಯ ಎಂದು ತಿಳಿಸಿದರು.

    ತಾಲೂಕಿನಾದ್ಯಂತ ಶಾಂತ ವಾತಾವರಣ…

    ಲಾಕ್‌ಡೌನ್ ಪರಿಣಾಮ ಅಥಣಿ ಪಟ್ಟಣದಲ್ಲಿ ಸ್ತಬ್ಧ ವಾತಾವರಣ ಮುಂದುವರಿದಿದೆ. ಪಟ್ಟಣ ಸೇರಿ ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಲ್ಲೂ ಶಾಂತ ವಾತಾವರಣ ಮನೆ ಮಾಡಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲ ಚೆಕ್‌ಪೋಸ್ಟ್ ಮತ್ತು ಗಡಿ ಭಾಗಗಳಲ್ಲಿ ಕೂಡ ನಿಗಾ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts