More

    ತಾಡಪಾಲಗಾಗಿ ಅಧಿಕಾರಿಗಳೊಂದಿಗೆ ವಾಗ್ವಾದ

    ಹಿರೇಬಾಗೇವಾಡಿ: ಸರ್ಕಾರದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಕೊಡಮಾಡಿದ ಪ್ಲಾಸ್ಟಿಕ್ ತಾಡಪಾಲ ಪಡೆಯಲು ಜನಪ್ರತಿನಿಧಿಗಳ ಶಿಾರಸು ಪಡೆಯುವುದನ್ನು ವಿರೋಧಿದ ರೈತರು ಬುಧವಾರ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೃಷಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರಿಗೆ ಅನುಕೂಲವಾಗಲೆಂದು ಸರ್ಕಾರದಿಂದ 600 ಪ್ಲಾಸ್ಟಿಕ್ ತಾಡಪಾಲ ನೀಡಲಾಗಿದೆ. ಆದರೆ, ಇಲ್ಲಿ ತಾಡಪಾಲಗಳ ಬೇಡಿಕೆ ಇನ್ನೂ ಹೆಚ್ಚಿದೆ. ಹೀಗಾಗಿ ತಾಡಪಾಲ ಪಡೆಯಲು ರೈತರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಕ್ಷೇತ್ರದ ಶಾಸಕರ ಶಿಾರಸು ಪತ್ರ ತರಬೇಕಿದೆ. ಇದು ಸೂಕ್ತವಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ರೈತರ ಪ್ರಶ್ನೆ: ಇಲ್ಲಿಯ ರೈತರಾದ ಬಸವರಾಜ ಹಂಚಿನಮನಿ, ಬಿ.ಡಿ. ಗಣಾಚಾರಿ, ದಯಾನಂದ ನಾಯ್ಕರ, ವೀರಬಸಪ್ಪ ವಾಲಿಕಾರ, ಈರಪ್ಪ ಬೋಡ್ಕಿ, ಪಡಿಗೌಡ ದೊಡಗೌಡರ ಹಾಗೂ ಇತರರು, ‘930 ರೂ. ಬೆಲೆಬಾಳುವ ತಾಡಪಾಲ ಪಡೆಯಲು ಜನಪ್ರತಿನಿಧಿಗಳ ಶಿಾರಸು ಏಕೆ ಬೇಕು? ಅಷ್ಟಕ್ಕೂ ಅವು ಆ ಜನಪ್ರತಿನಿಧಿಗಳ ಅನುದಾನದಲ್ಲಿ ಬಂದ ತಾಡಪಾಲಗಳಲ್ಲ. ಸರ್ಕಾರ ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಕೊಟ್ಟಿದ್ದು. ಅದಕ್ಕೆ ಜನಪ್ರತಿನಿಧಿಗಳ ಮೊಹರು ಏಕೆ ಬೇಕು?’ ಎಂದು ಕೃಷಿ ಅಧಿಕಾರಿಗಳನ್ನು ರೈತರು ಪ್ರಶ್ನಿಸಿದ್ದಾರೆ.

    ಮೇಲಧಿಕಾರಿಗಳ ಆದೇಶ: ಕೃಷಿ ಅಧಿಕಾರಿ ಎಂ.ಡಿ. ಗಣಾಚಾರಿ, ಜನಪ್ರತಿನಿಧಿಗಳ ಶಿಾರಸು ಪಡೆದೇ ತಾಡಪಾಲ ನೀಡಬೇಕು ಎಂದು
    ಮೇಲಧಿಕಾರಿಗಳ ಆದೇಶವಿದೆ. ಒಟ್ಟು ಆರು ನೂರು ತಾಡಪತ್ರಿಗಳ ಪೈಕಿ ಒಬ್ಬ ತಾಪಂ ಸದಸ್ಯರಿಗೆ ಹತ್ತು, ಜಿಪಂ ಸದಸ್ಯರಿಗೆ ಹದಿನೈದು ಉಳಿದವುಗಳನ್ನು ಶಾಸಕರ ಶಿಾರಸು ಪ್ರಕಾರವೇ ವಿತರಿಸಬೇಕು ಎಂದು ನಮಗೆ ಆದೇಶವಿದೆ. ಅದರಂತೆ ನಾವು ವಿತರಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts