More

    ಡಿವೋರ್ಸ್​ ಕೊಡಲು ಮುಂದಾದ ಗಂಡನ ಕೊಲ್ಲಲು ಪ್ರಿಯಕರನಿಗೆ ಸುಪಾರಿ: ಇದು ಖ್ಯಾತ ಕ್ರೀಡಾಪಟುವಿನ ದುರಂತ ಕತೆ!

    ಅಂಕಾರ (ಟರ್ಕಿ): ನಂಬಿಕೆ ಅರ್ಹಳಲ್ಲ ಎಂದು ಗೊತ್ತಾದ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿಯನ್ನು ಕೊಲ್ಲಲು ಪ್ರಖ್ಯಾತ ಫುಟ್​ಬಾಲ್​ ಆಟಗಾರನ ಪತ್ನಿ ಸುಪಾರಿ ನೀಡಿರುವ ಘಟನೆ ಟರ್ಕಿಯಲ್ಲಿ ಬೆಳಕಿಗೆ ಬಂದಿದೆ.

    ಯುಗ್ಮುರ್​ ಆಸಿಕ್​ (27) ಎಂಬಾಕೆ ತನ್ನ ಪತಿ ಟರ್ಕಿ ದೇಶದ ಅಂತಾರಾಷ್ಟ್ರೀಯ ಮಾಜಿ ಫುಟ್​ಬಾಲ್ ಆಟಗಾರ ಎಮ್ರೆ ಆಸಿಕ್​ (46)ರನ್ನು ಹತ್ಯೆ ಮಾಡಲು ಬರೋಬ್ಬರಿ 1 ಮಿಲಿಯನ್​ ಪೌಂಡ್​ ( ಭಾರತೀಯ ಕರೆನ್ಸಿ ಪ್ರಕಾರ 9,48,31,784 ರೂಪಾಯಿ) ಸುಪಾರಿ ನೀಡಿದ್ದಳು ಎಂದು ತಿಳಿದುಬಂದಿದೆ. ತನ್ನ ಲವರ್​ ಎರ್ಡಿ ಸುಂಗುರ್​ಗೆ ಹತ್ಯೆ ಮಾಡಲು ತಿಳಿಸಿದ್ದಳು. ಕೊಲೆ ಮಾಡಲು ಶಸ್ತ್ರಾಸ್ತ್ರವನ್ನು ಸಹ ಯುಗ್ಮುರ್​ ನೀಡಿದ್ದಳು.

    ಡಿವೋರ್ಸ್​ ಕೊಡಲು ಮುಂದಾದ ಗಂಡನ ಕೊಲ್ಲಲು ಪ್ರಿಯಕರನಿಗೆ ಸುಪಾರಿ: ಇದು ಖ್ಯಾತ ಕ್ರೀಡಾಪಟುವಿನ ದುರಂತ ಕತೆ!
    ಯುಗ್ಮೂರ್​ ಆಸಿಕ ಮತ್ತು ಎಮ್ರೆ ಆಸಿಕ್​

    ಯುಗ್ಮೂರ್​ 2012ರಲ್ಲಿ ಎಮ್ರೆಯನ್ನು ಮದುವೆಯಾಗಿದ್ದಾಳೆ. ದಂಪತಿಗೆ ಮೂವರು ಮಕ್ಕಳು ಸಹ ಇದ್ದಾರೆ. ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ನಂಬಿಕೆ ಅರ್ಹವಲ್ಲ ಎಂದು ಪತ್ನಿಯ ವಿರುದ್ಧ ಎಮ್ರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ಯುಗ್ಮೂರ್​ ಸುಪಾರಿ ನೀಡಿದ್ದಳು. ಸುಂಗೂರ್​ ಆರಂಭದಲ್ಲಿ ಸುಪಾರಿ ಕಿಲ್ಲರ್​ನನ್ನು ಭೇಟಿಯಾಗಿದ್ದ. ಆದರೆ, ಒಪ್ಪದಿದ್ದಕ್ಕೆ ತಾನೇ ಕೃತ್ಯವೆಸಗಲು ಮುಂದಾಗಿದ್ದ. ಆದರೆ, ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಇದನ್ನೂ ಓದಿ: ಗೌರಮ್ಮ ವಾಕ್ಸಮರಕ್ಕೆ ಬೆಚ್ಚಿದ ಕಾಂಗ್ರೆಸ್​: ಡಿ.ಕೆ. ರವಿ ಪತ್ನಿ ಕುಸುಮಾ ಆಸೆಗೆ ತಣ್ಣೀರು ಸಾಧ್ಯತೆ!?

    ಸಂಗೂರ್​ ನ್ಯಾಯಾಲಯದಲ್ಲಿ ತನ್ನ ತಪ್ಪು ಒಪ್ಪಿಕೊಂಡಿದ್ದು, ಯುಗ್ಮೂರ್​ ಜತೆ ಅಕ್ರಮ ಸಂಬಂಧ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾನೆ. ಎಮ್ರೆ ಸಾವಿನ ನಂತರ ಆತನ ಆಸ್ತಿಯನ್ನು ಅನುವಂಶಿಕವಾಗಿ ಪಡೆಯುವ ಯೋಚನೆಯಲ್ಲಿದ್ದಳು. ಹೀಗಾಗಿ ಕೊಲೆ ಮಾಡುವಂತೆ ನನಗೆ ಹೇಳಿದಳು. ಆದರೆ, ನಾನು ನಿರಾಕರಿಸಿದೆ ಎಂದಿದ್ದಾನೆ.

    ಡಿವೋರ್ಸ್​ ಕೊಡಲು ಮುಂದಾದ ಗಂಡನ ಕೊಲ್ಲಲು ಪ್ರಿಯಕರನಿಗೆ ಸುಪಾರಿ: ಇದು ಖ್ಯಾತ ಕ್ರೀಡಾಪಟುವಿನ ದುರಂತ ಕತೆ!
    ಯುಗ್ಮೂರ್​ ಆಸಿಕ್​ ಮತ್ತು ಎರ್ಡಿ ಸಂಗೂರ್​

    ಒಂದು ದಿನ ಯುಗ್ಮೂರ್​ ಒಂದು ಮಾಂಸದ ತುಣುಕನ್ನು ನನಗಾಗಿ ತಂದಿದ್ದಳು. ಮಾಂಸಕ್ಕೆ ಗುರಿಯಿಟ್ಟು ಶೂಟ್​ ಮಾಡಲು ಹೇಳಿದಳು. ನಾನು ಪ್ರಯತ್ನಿಸಿದೆ. ಆದರೆ, ಗುರಿ ತಪ್ಪಿತು. ನೀನು ಮಾಡುತ್ತೀಯ ಪ್ರಯತ್ನಿಸು ಎಂದು ಕೋಪದಿಂದಲೇ ಹೇಳಿದಳು ಎಂದು ಸಂಗೂರ್​ ತಪ್ಪೊಪ್ಪಿಕೊಂಡಿದ್ದಾನೆ.

    ಹತ್ಯೆಗೆ ಶಸ್ತ್ರಾಸ್ತ್ರವನ್ನು ನೀಡಿರುವ ಸಂಬಂಧ ದಾಖಲೆಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನು ಸಪಾರಿ ಪ್ರಕರಣವನ್ನು ಸ್ವತಃ ಕಾಂಟ್ರ್ಯಾಕ್ಟ್​ ಕಿಲ್ಲರ್​ ಎಮ್ರೆ ಬಳಿ ಬಿಚ್ಚಿಟ್ಟ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಯುಗ್ಮೂರ್​ ಮತ್ತು ಸಂಗೂರ್​ ಇದೀಗ ಪೊಲೀಸ್​ ಕಸ್ಟಡಿಯಲ್ಲಿದ್ದು, ವಿಚಾರಣೆಗೆ ಎದುರು ನೋಡುತ್ತಿದ್ದಾರೆ.

    ಇನ್ನು ಎಮ್ರೆ ಆಸಿಕ್​ ಅವರು ಇಸ್ತಾನ್​ಬುಲ್​ ಕ್ಲಬ್ಸ್​, ಗಲಾಟಾಸರಾಯ್​, ಫೆನೆರ್​ಬೆಹ್ಸ್​ ಮತ್ತು ಬೆಸಿಕ್ತಸ್​ ಪರ ಆಡಿದ್ದು, ಟರ್ಕಿಯ ಯಶಸ್ವಿ ಓಟದ ವೇಳೆ 34 ಕ್ಯಾಪ್​ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಹಸ್ತಮೈಥುನ ದೃಶ್ಯದಲ್ಲಿ ನಟಿಸಲು ಶ್ರುತಿ ಹಾಸನ್ ರೆಡಿ?: ಯಾವ ಚಿತ್ರ ಎಂಬುದರ ಕುತೂಹಲಕರ ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts