More

    ಫುಟ್ಬಾಲ್ ತರಬೇತುದಾರನಾಗಿದ್ದವ ಮೊಬೈಲ್ ಫೋನ್ ಕಳ್ಳನಾಗಿದ್ದೇಕೆ?

    ನವದೆಹಲಿ: ಫುಟ್ಬಾಲ್ ತರಬೇತುದಾರನಾಗಿದ್ದ ವ್ಯಕ್ತಿಯೊಬ್ಬ ದೆಹಲಿ ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ಮೊಬೈಲ್ ಫೋನ್ ಕದ್ದು ಕಳ್ಳನೆನಿಸಿಕೊಂಡಿದ್ದಾನೆ.
    ದೆಹಲಿ ಫುಟ್ಬಾಲ್ ಲೀಗ್ 2020 ರ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಕ್ರೀಡಾಂಗಣದ (ಜೆಎಲ್‌ಎನ್) ಡ್ರೆಸ್ಸಿಂಗ್ ಕೊಠಡಿಯಿಂದ ಮೊಬೈಲ್ ಫೋನ್‌ಗಳು ಕಳುವಾಗಿದ್ದವು. ಆ ವ್ಯಕ್ತಿ 2013ರಲ್ಲಿ ತನ್ನನ್ನು ಕೆಲಸದಿಂದ ವಜಾಗೊಳಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆತ ಬಯಸಿದ್ದ ಎಂದು ಆರೋಪಿಸಲಾಗಿದೆ.
    ತರಬೇತುದಾರನನ್ನು ಶೇಖರ್ ಪಾಠಕ್ ಎಂದು ಗುರುತಿಸಲಾಗಿದೆ. ಪಾಠಕ್ ನನ್ನು 2013 ರಲ್ಲಿ ತೆಗೆದುಹಾಕಿದ್ದರಿಂದ ಕಳ್ಳತನ ಶುರು ಮಾಡಿದ್ದ, ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ಬಯಸಿದ್ದ.

    ಇದನ್ನೂ ಓದಿ: ಸಾಮಾಜಿಕ ಪಿಡುಗುಗಳಿಗೆ ಬೇಸತ್ತು ಬಾಲಕಿ ಆತ್ಮಹತ್ಯೆ

    ಮಾರ್ಚ್ 13 ರಂದು ದೆಹಲಿ ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡವು ದೆಹಲಿ ಫುಟ್ಬಾಲ್ ಲೀಗ್ 2020 ರಲ್ಲಿ ಪಂದ್ಯದಲ್ಲಿ ಭಾಗವಹಿಸಿತ್ತು . ಈ ಸಮಯದಲ್ಲಿ, ಕ್ಯಾಬಿನ್‌ಗಳ ಜೊತೆಗೆ ತಂಡಕ್ಕೆ ತಮ್ಮ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಲು ಅನುಕೂಲವಾಗುವಂತೆ
    ಡ್ರೆಸ್ಸಿಂಗ್ ಕೋಣೆಯನ್ನೂ ಮಂಜೂರು ಮಾಡಲಾಗಿತ್ತು ಪಂದ್ಯದ ನಂತರ ತಂಡವು ಡ್ರೆಸ್ಸಿಂಗ್ ಕೋಣೆಗೆ ಮರಳಿದಾಗ, ಅಲ್ಲಿ 12 ಮೊಬೈಲ್ ಫೋನ್‌ಗಳು, ಜತೆಗೆ 10,000 ರೂ. ನಗದು ಕೂಡ ಕಾಣೆಯಾಗಿತ್ತು.
    ಘಟನೆಯ ನಂತರ, ಲೋಧಿ ಕಾಲೋನಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಪೊಲೀಸರು ಕ್ರೀಡಾಂಗಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಕದ್ದ ಮೊಬೈಲ್ ಫೋನ್‌ಗಳನ್ನು ತಾಂತ್ರಿಕ ಕಣ್ಗಾವಲಿನಲ್ಲಿಟ್ಟರು. ಈ ಸಮಯದಲ್ಲಿ ಕದ್ದ ಫೋನ್‌ಗಳಲ್ಲಿ ಒಂದನ್ನು ಸ್ವಿಚ್ ಆನ್ ಮಾಡಲಾಗಿದ್ದು, ಪೊಲೀಸರು ಅದನ್ನು ಪತ್ತೆ ಹಚ್ಚಿದ್ದಾರೆ.

    ಇದನ್ನೂ ಓದಿ: LIVE: ಸ್ವಚ್ಛ ಮಹೋತ್ಸವ- ದೇಶದ ನಂ.1 ಸ್ವಚ್ಛ ನಗರ ಯಾವುದು?

    ಫೋನ್ ಬಳಸಿದ ವ್ಯಕ್ತಿ, ಪಾಠಕ್ ಅದನ್ನು ತನಗೆ ಮಾರಿದ್ದಾನೆ ಎಂದು ಹೇಳಿದ. ಪೊಲೀಸರು ಪಾಠಕ್ ಮನೆಯಲ್ಲಿ ದಾಳಿ ನಡೆಸಿ 12 ಫೋನ್‌ಗಳ ಪೈಕಿ 9 ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
    2011 ರಲ್ಲಿ ಪಾಠಕ್​​ನನ್ನು ಕ್ರೀಡಾಂಗಣದಿಂದ ನೇಮಕ ಮಾಡಲಾಗಿತ್ತು. ನಂತರ ಆತನ ಸಮಯಪ್ರಜ್ಞೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಇನ್ನೊಬ್ಬ ತರಬೇತುದಾರರಿಂದ ಬಂದ ದೂರುಗಳ ಮೇಲೆ ಪಾಠಕ್​​ನನ್ನು 2013ರಲ್ಲಿ ತೆಗೆದುಹಾಕಲಾಯಿತು ಎಂದು ಡಿಸಿಪಿ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.

    ಉಗ್ರರಿಗೆ ಚೀನಾ ಶಸ್ತ್ರಾಸ್ತ್ರ ನೆರವು?: ಕಾಶ್ಮೀರದ ಎನ್​ಕೌಂಟರ್​ನಲ್ಲಿ 3 ಉಗ್ರರು ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts