More

    ನಾಡಪ್ರಭುವಿನ ಆದರ್ಶ ಅನುಸರಿಸಿ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸಲಹೆ, ಬೆಂಗಳೂರಿನ ಬೆಳವಣಿಗೆಗೆ ಮೆಚ್ಚುಗೆ

    ನೆಲಮಂಗಲ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಆದರ್ಶವನ್ನು ಎಲ್ಲರೂ ಅನುಸರಿಸಿ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು.
    ಕರೊನಾ ಕಾರಣದಿಂದ ಇಂದು ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚಿಸಲಾಗುವುದು. ಕೆಂಪೇಗೌಡರು ನಿರ್ಮಿಸಿರುವ ಬೆಂಗಳೂರು ಇಂದು ನಗರೀಕರಣ, ಹಸಿರುವಲಯ, ಸ್ವಚ್ಛತೆ ಸೇರಿ ಅಭಿವೃದ್ಧಿಯಲ್ಲಿ ವಿಶ್ವದಲ್ಲೇ 7ನೇ ಸ್ಥಾನ ಪಡೆದಿರುವುದು ಸಂತಸದ ಸಂಗತಿ ಎಂದರು.

    ಮೈತ್ರಿಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಡಪ್ರಭು ಕೆಂಪೇಗೌಡ ಭವನ ಸ್ಥಾಪನೆಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅವಶ್ಯವಿರುವ ಜಾಗವನ್ನು ಪತ್ತೆ ಮಾಡಿ ಭವನ ನಿರ್ಮಿಸಲಾಗುವುದು. ನಿರ್ಮಾಣಕ್ಕೆ ನಗರದಲ್ಲಿ ಕನಿಷ್ಠ 1 ಎಕರೆ ಜಾಗದಲ್ಲಿ ಬೃಹತ್‌ಕಟ್ಟಡ ನಿರ್ಮಿಸಲಾಗುವುದು ಎಂದರು.

    ಮುಖಂಡರ ಮನವಿ: ಸಮುದಾಯದ ಪ್ರಗತಿಗೆ ಕೆಂಪೇಗೌಡ ಭವನ ಅತ್ಯವಶ್ಯಕವಾಗಿದೆ. ಸರ್ಕಾರ ಅಥವಾ ದಾನಿಗಳ ಮನವೊಲಿಸಿ ಸಮಾಜಕ್ಕೆ ಅಭಿವೃದ್ಧಿಗೆ ಅವಶ್ಯವಿರುವ ಭವನ ನಿರ್ಮಾಣ ಮಾಡುವ ಜತೆಗೆ ನಗರದ ಸೂಕ್ತ ಸ್ಥಳದಲ್ಲಿ ಕೆಂಪೇಗೌಡ ಪುತ್ಹಳಿ ನಿರ್ಮಿಸಬೇಕಿದೆ. ಶಾಸಕರ ಹಾಗೂ ದಾನಿಗಳ ಸಹಕಾರ ಪಡೆದುಕೊಂಡು ಪಕ್ಷಾತೀತವಾಗಿ ಕೆಂಪೇಗೌಡರಂತೆ ಲೋಕೋಪಯೋಗಿ ಕಾರ್ಯ ಮಾಡುವ ಮೂಲಕ ಮಾದರಿ ಕ್ಷೇತ್ರವಾಗಿ ಪರಿವರ್ತಿಸಬೇಕು ಎಂದು ಸಮುದಾಯ ಮುಖಂಡರು ಮನವಿ ಮಾಡಿದರು.

    ಅಧಿಕಾರಿಗಳು ಸಮುದಾಯದ ಮುಖಂಡರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

    ನಗರಸಭೆ ಪೌರಾಯುಕ್ತ ಎಲ್.ಮಂಜುನಾಥ್‌ಸ್ವಾಮಿ, ಶಿರಸ್ತೇದಾರ ಎಂ.ವಿ.ಮಂಜುನಾಥ್, ಶ್ರೀನಿವಾಸಮೂರ್ತಿ, ರಾಜಸ್ವನಿರೀಕ್ಷಕ ಸುದೀಪ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ.ರಂಗನಾಥ್, ನಗರಸಭೆ ಪರಿಸರ ಅಭಿಯಂತೆ ಉಮಾ, ಆರೋಗ್ಯ ನಿರೀಕ್ಷಕ ಬಸವರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಒಕ್ಕಲಿಗ ಯುವವೇದಿಕೆ ಅಧ್ಯಕ್ಷ ಬಿ.ಎಂ.ಬಾಬು, ಪುರಸಭೆ ಸದಸ್ಯ ಆಂಜಿನಮೂರ್ತಿ, ಮುಖಂಡರಾದ ಉಮೇಶ್‌ಗೌಡ, ಕೆ.ಮಂಜುನಾಥ್, ಶೇಖರ್‌ಗೌಡ, ಮನುಗೌಡ, ಸಂಪತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts