More

    ಜಾನಪದ ಕಲೆ ಉಳಿಸಿ ಬೆಳೆಸುವ ಕಾರ್ಯವಾಗಲಿ

    ಶಿರಸಿ: ಕಲೆ ಮತ್ತು ಸಂಸ್ಕೃತಿಗಳನ್ನೊಳಗೊಂಡ ಜಿಲ್ಲೆ ನಮ್ಮ ಉತ್ತರ ಕನ್ನಡ ಜಿಲ್ಲೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ತಾಲೂಕಿನ ಬಚಗಾಂವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ಜಾನಪದ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆ ಸಾಂಸ್ಕೃತಿಕವಾಗಿ ದೇಶದಲ್ಲೇ ಹೆಸರು ಮಾಡಿದೆ. ಇಲ್ಲಿರುವ ಕಲೆಗಳನ್ನು ನಾವೆಲ್ಲರೂ ಇನ್ನೂಶ್ರೀಮಂತಗೊಳಿಸಬೇಕು ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಎಂ. ಮಾತನಾಡಿ, ಗ್ರಾಮೀಣ ಭಾಗದ ಕಲೆಗಳನ್ನು ಪ್ರೋತ್ಸಾಹಿಸಬೇಕು. ತಳ ಸಮುದಾಯದ ಕಲಾವಿದರನ್ನು ಬೆಳೆಸಬೇಕು, ವೇದಿಕೆ ನಿರ್ಮಾಣ ಮಾಡಿಕೊಡಬೇಕು ಎಂಬ ಕಾರಣಕ್ಕೆ ಇಂಥ ಉತ್ಸವ ನಡೆಸುತ್ತಿದೆ. ಮುಂದಿನ ಪೀಳಿಗೆಗೆ ಕಲೆ ಉಳಿಸಬೇಕು ಎಂದರು.

    ಬಚಗಾಂವ ಸೊಸೈಟಿಯ ಅಧ್ಯಕ್ಷ ಎಸ್.ಎನ್ ಹೆಗಡೆ ಮಾತನಾಡಿ, ಸಾಂಸ್ಕೃತಿಕ ಸಂಭ್ರಮ ಉಳಿಸಿ ಬೆಳೆಸಬೇಕು. ಇಡೀ ಊರಿನಲ್ಲಿ ಸಂಭ್ರಮ ಇದೆ. ಕಲಾ ಸೌರಭ ಇಲ್ಲಿದೆ ಎಂದರು.

    ಗ್ರಾಪಂ ಅಧ್ಯಕ್ಷ ತಿರುಮಲೇಶ್ವರ ಮಡಿವಾಳ, ಜಿಪಂ ಮಾಜಿ ಸದಸ್ಯೆ ಉಷಾ ಹೆಗಡೆ, ಸ್ಥಳೀಯ ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿ ಗೌಡ, ಸದಸ್ಯರಾದ ರಘುಪತಿ ನಾಯ್ಕ, ಶೃತಿ ಕಾನಡೆ, ಸುಮಿತ್ರಾ ಮೇದಾರ, ತಿಮ್ಮಪ್ಪ ನಾಯ್ಕ, ವನಜಾಕ್ಷಿ ಗೌಡ, ಶೀಲಾ ಹೆಬ್ಬಾರ, ಶ್ರೀಮತಿ ರಾಜು, ಇಮ್ತಿಯಾಜ್ ಖಾದರ, ದೇವರಾಜ ಮರಾಠೆ, ಜ್ಯೋತಿ ಪಾಟೀಲ, ಅಮರ ನೇರಲಕಟ್ಟೆ, ಇಂದೂಧರ ನಾಯ್ಕ, ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖರು ಇತರರಿದ್ದರು. ಶಿರಸಿ ರತ್ನಾಕರ ಹಾಗೂ ಪಿಡಿಒ ಪ್ರೀತಿ ಶೆಟ್ಟಿ ನಿರ್ವಹಿಸಿದರು.

    ಹಲವು ಜಾನಪದ ಕಲಾ ತಂಡಗಳ ಸಾಂಸೃ್ಕಕ ಕಾರ್ಯಕ್ರಮಗಳು ನೋಡಗರ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts