More

    ಬಾಲ್ಯವಿವಾಹ, ಲೈಂಗಿಕ ಕಿರುಕುಳದತ್ತ ಗಮನಹರಿಸಿ

    ಶ್ರೀರಂಗಪಟ್ಟಣ: ಗ್ರಾಮೀಣ ಭಾಗದಲ್ಲಿ ಜೀವಂತವಿರುವ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ ಹಾಗೂ ಲೈಂಗಿಕ ಕಿರುಕುಳದ ಬಗ್ಗೆ ತಾಲೂಕು ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಸಲಹೆ ನೀಡಿದರು.

    ತಾಲೂಕಿನ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೇಣು ನೇತೃತ್ವದಲ್ಲಿ ಆಯೋಜಿಸಿದ್ದ ‘ಗ್ರಾಮೀಣ ಜನರಿಗೆ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರು ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿದ್ದರೂ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹ ಹಾಗೂ ಲೈಂಗಿಕ ಕಿರುಕುಳ ಜೀವಂತವಾಗಿವೆ. ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಿ ಸೂಕ್ತ ಅರಿವು ಮೂಡಿಸುವುದರ ಜತೆಗೆ ಕಾನೂನಿನಲ್ಲಿರುವ ಕಠಿಣ ಶಿಕ್ಷೆಗಳ ಬಗ್ಗೆ ಜಾಗೃತಿ ನೀಡಬೇಕು ಎಂದರು.

    ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕ್ರಮ, ಶಾಲೆಗಳಲ್ಲಿ ಹೊರಗಿನವರ ಅಕ್ರಮ ಪ್ರವೇಶಕ್ಕೆ ನಿಷೇಧ, ಪೊಲೀಸರಿಂದ ಜಾಗೃತಿ ಮಾಹಿತಿ, ಸ್ಥಳೀಯವಾಗಿ ಮಕ್ಕಳ ಗ್ರಾಮ ಸಭೆ ಹಾಗೂ ವಿವಿಧ ಇಲಾಖೆಯಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಪರಿಶೀಲಿಸಲಾಯಿತು. ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ವಿಶೇಷ ತರಬೇತಿ ಕಾರ್ಯಾಗಾರ ನೀಡುವಂತೆ ಜ್ಞಾನದಾಸೋಹ ಸಂಸ್ಥೆಗೆ ಸಲಹೆ ನೀಡಲಾಯಿತು.

    ತಮ್ಮ ಕುಟುಂಬದಲ್ಲಿ 19 ಜನ ಸದಸ್ಯರಿದ್ದು ಸ್ವಾಭಿಮಾನದ ಜೀವನ ರೂಪಿಸಿಕೊಳ್ಳಲು ಸೂರು ಇಲ್ಲದೆ ಕಷ್ಟಪಡುವಂತಾಗಿದೆ. ಕೂಡಲಕುಪ್ಪೆ ವ್ಯಾಪ್ತಿಯ ಗ್ರಾಮ ಠಾಣಾದಲ್ಲಿ ನಿವೇಶನ ಕೊಡಬೇಕು ಎಂದು ಗ್ರಾಮದ ತನುಶ್ರೀ ಎಂಬ ಬಾಲಕಿ ಮನವಿ ಸಲ್ಲಿಸಿದಳು. ಈ ಬಗ್ಗೆ ಕ್ರಮವಹಿಸುವಂತೆ ಪಿಡಿಒ ಸುರೇಶ್ ಕುಮಾರ್ ಅವರಿಗೆ ಸೂಚಿಸಲಾಯಿತು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಜಗದೀಶ್, ಉಪಾಧ್ಯಕ್ಷೆ ರಶ್ಮಿ, ಸದಸ್ಯರಾದ ಜಗದೀಶ್, ಸೋಮಶೇಖರ್, ಪ್ರೀತಿ, ಪ್ರಭಾಕರ್, ಸಂಪೂರ್ಣ, ಮಕ್ಕಳ ರಕ್ಷಣಾ ಆಪ್ತ ಸಮಾಲೋಚಕಿ ರಶ್ಮಿ, ವೈದ್ಯಾಧಿಕಾರಿ ಡಾ.ಗೋಪಾಲ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಸೆಲ್ವಿ ರುಕ್ಮಿಣಿ, ಕಾರ್ಯದರ್ಶಿ ವೆಂಕಟರಾಮು, ಸಿಬ್ಬಂದಿ ದಿವ್ಯಾ, ಗ್ರಂಥಪಾಲಕ ಸೋಮಶೇಖರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts