More

  ಹಾಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೊದಲ ಜಯ: ಶೆಫಾಲಿ-ಲ್ಯಾನಿಂಗ್ ಭರ್ಜರಿ ಜತೆಯಾಟ

  ಬೆಂಗಳೂರು: ಎಡಗೈ ಸ್ಪಿನ್ನರ್ ರಾಧಾ ಯಾದವ್ (20ಕ್ಕೆ 4), ಮಾರಿಜಾನ್ನೆ ಕಾಪ್ (5ಕ್ಕೆ 3) ಬಿಗಿ ಬೌಲಿಂಗ್ ದಾಳಿ ಹಾಗೂ ಆರಂಭಿಕ ಬ್ಯಾಟುಗಾರ್ತಿ ಶೆಫಾಲಿ ವರ್ಮ (64* ರನ್, 43 ಎಸೆತ, 6 ಬೌಂಡರಿ, 4 ಸಿಕ್ಸರ್) ಮತ್ತು ನಾಯಕಿ ಮೆಗ್ ಲ್ಯಾನಿಂಗ್ (51 ರನ್, 43 ಎಸೆತ, 6 ಬೌಂಡರಿ) ಮೊದಲ ವಿಕೆಟ್ ಜತೆಯಾಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) 2ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.

  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಯುಪಿ ತಂಡ, ಶ್ವೇತಾ ಸೆಹ್ರಾವತ್ (45) ಹೋರಾಟದಿಂದ 9 ವಿಕೆಟ್‌ಗೆ 119 ರನ್ ಕಲೆಹಾಕಿತು. ಪ್ರತಿಯಾಗಿ ಶೆಾಲಿ-ಲ್ಯಾನಿಂಗ್ ಮೊದಲ ವಿಕೆಟ್‌ಗೆ ಪೇರಿಸಿದ 119 ರನ್‌ಗಳ ಜತೆಯಾಟದ ಬಲದಿಂದ 14.3 ಓವರ್‌ಗಳಲ್ಲಿ 1 ವಿಕೆಟ್‌ಗೆ 123 ರನ್‌ಗಳಿಸಿ 33 ಎಸೆತ ಬಾಕಿ ಇರುವಂತೆಯೇ ಟೂರ್ನಿಯ ಮೊದಲ ಜಯ ಕಂಡಿತು.

  ಡೆಲ್ಲಿ ಕ್ಯಾಪಿಟಲ್ಸ್: 9 ವಿಕೆಟ್‌ಗೆ 119 (ಅಲಿಸ್ಸಾ 13, ಗ್ರೇಸ್ ಹ್ಯಾರಿಸ್ 17, ಶ್ವೇತಾ 45, ಕಿರಣ್ 10, ಪೂನಂ 10, ರಾಧಾ 20ಕ್ಕೆ 4, ಮಾರಿಜಾನ್ನೆ 5ಕ್ಕೆ 3). ಡೆಲ್ಲಿ ಕ್ಯಾಪಿಟಲ್ಸ್: 14.3 ಓವರ್‌ಗಳಲ್ಲಿ 1 ವಿಕೆಟ್‌ಗೆ 121 (ಶೆಾಲಿ ವರ್ಮ 64*, ಲ್ಯಾನಿಂಗ್ 51, ಜೆಮೀಮಾ 4*, ಎಕೆಲ್‌ಸ್ಟೋನ್ 31ಕ್ಕೆ 1).

  ಇಂದಿನ ಪಂದ್ಯ ಆರ್‌ಸಿಬಿ- ಗುಜರಾತ್ ಜೈಂಟ್ಸ್
  ಆರಂಭ: ರಾತ್ರಿ 7.30
  ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts