More

    PHOTOS| ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಪುಷ್ಪಪ್ರಿಯರು

    ಬೆಂಗಳೂರು: ಲಾಲ್​ಬಾಗ್​ನಲ್ಲಿ ಜ.26ರ ವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನವು ಪುಷ್ಪಪ್ರಿಯರನ್ನು ಕೈ ಬೀಸಿ ಕರೆಯುತ್ತಿದ್ದು, ಭಾನುವಾರವೂ ಸಾವಿರಾರು ಮಂದಿ ಭೇಟಿ ನೀಡಿ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಸ್ವಾಮಿ ವಿವೇಕಾನಂದರನ್ನು ಕಣ್ತುಂಬಿಗೊಂಡರು.

    ರಜಾ ದಿನವಾದ್ದರಿಂದ ಬೆಳಗ್ಗೆ 9ರಿಂದಲೇ ಕುಟುಂಬ ಸಮೇತರಾಗಿ ಜನ ಆಗಮಿಸಿದರು. ಉತ್ಸಾಹದಿಂದ ಬಂದ ಜನ ದೇಶ-ವಿದೇಶಗಳ ಬಗೆ ಬಗೆಯ ಹೂವುಗಳನ್ನು ಕಂಡು ಆಕರ್ಷಿತರಾದರು. ಕಳೆದ ಬಾರಿಗಿಂತ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಷಯ ಚೆನ್ನಾಗಿದೆ ಎಂಬ ಅಭಿಪ್ರಾಯ ಮೂಡಿಬಂತು. ಕಂಡು ಕೇಳರಿಯದ ಬಣ್ಣ-ಬಣ್ಣದ ವಿದೇಶಿ ಹೂಗಳ ಬಗ್ಗೆ ಮಹಿಳೆಯರು ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ಸದಾ ಕೆಲಸದಲ್ಲೇ ಬಿಜಿಯಾಗಿರುವ ಯುವ ಪೀಳಿಗೆಯ ಪುಷ್ಪಪ್ರಿಯರು ವಿವಿಧ ಜಾತಿಯ ಗುಲಾಬಿ, ಹೃದಯಾಕಾರದ ಹೂವಿನ ಕಮಾನುಗಳು, ತೂಗುವ ಹೂಗಳ ಬಾಗುವ ಚೆಲುವು, ತೂಗು ಹೂಗಳು ಹಾಗೂ ಕಾರಂಜಿಗಳು ಸೇರಿ ಪ್ರದರ್ಶನದಲ್ಲಿದ್ದ ಫಲಪುಷ್ಪ ಕಂಡು ಮೂಕವಿಸ್ಮಿತರಾದರು. ಫಲಪುಷ್ಪ ಪ್ರದರ್ಶನ ವೀಕ್ಷಿಸಿ ಖುಷಿಯಾದ ಜನ ವಿಜಯವಾಣಿ ದಿನಪತ್ರಿಕೆ ಜತೆ ತಮ್ಮ ಅನುಭವ ಹಂಚಿಕೊಂಡರು.

    ಬಣ್ಣ-ಬಣ್ಣದ ಹೂ ವೀಕ್ಷಿಸಿ ಸಂತಸಪಟ್ಟ ಯುವ ಪೀಳಿಗೆ

    PHOTOS| ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಪುಷ್ಪಪ್ರಿಯರು

    PHOTOS| ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡ ಪುಷ್ಪಪ್ರಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts