More

    ಲಾಲ್​ಬಾಗ್​ನಲ್ಲಿ ಜ.20ರಿಂದ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಅರಳಲಿದೆ ಬೆಂಗಳೂರು ಇತಿಹಾಸ

    ಬೆಂಗಳೂರು: ಗಣರಾಜ್ಯೋತ್ಸವ ಪ್ರಯುಕ್ತ ಲಾಲ್​ಬಾಗ್​ ಸಸ್ಯೋದ್ಯಾನದಲ್ಲಿ ಜ.20ರಿಂದ 30ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು 213ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಈ ಬಾರಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸಲಿದೆ.

    ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತೋಟಗಾರಿಕಾ ಸಚಿವ ಮುನಿರತ್ನ, ಈ ವರ್ಷ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರು ನಗರದ ಇತಿಹಾಸ. ಜ.20ರಿಂದ 30ರವರೆಗೆ ನಡೆಯಲಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. 10-12 ಲಕ್ಷ ಜನರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು.

    ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ 360 ಸ್ಪರ್ಧೆಗಳಿವೆ. ಜಪಾನೀಸ್ ಕಲೆಗಳ ಪ್ರದರ್ಶನ, 65ಕ್ಕೂ ಹೆಚ್ಚು ವಾರ್ಷಿಕ ಸಸ್ಯಗಳ ಪ್ರದರ್ಶನ, ವಿದೇಶದಿಂದ ಬರುವ ಹೂವುಗಳ ಪ್ರದರ್ಶನವೂ ಇರಲಿದೆ. 11 ದೇಶಗಳಿಂದ 69 ಬಗೆಯ ಹೂವುಗಳ ಪ್ರದರ್ಶನ ನಡೆಯಲಿದೆ. ಡಾರ್ಜಲಿಂಗ್​ನ ಹೂವುಗಳೂ ಇರಲಿದೆ. ಸುಮಾರು ಒಂದು ಲಕ್ಷ ಹೂವಿನ ಕುಂಡಗಳನ್ನ ಬಳಸಲಾಗಿದೆ. ಲಾಲ್​ಬಾಗ್​ ನಾಲ್ಕು ಗೇಟ್​ಗಳಿಂದಲೂ ಜನರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.

    ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿಗೋಪುರ ಅನಾವರಣಗೊಳ್ಳಲಿದೆ. ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್​ಗಳು ಕಂಗೊಳಿಸಲಿದೆ. 1,500 ವರ್ಷಗಳ ಬೆಂಗಳೂರು ಇತಿಹಾಸ ಸಾರಲಿದೆ ಎಂದು ವಿವರಿಸಲಿದೆ.

    9ನೇ ತರಗತಿ ವಿದ್ಯಾರ್ಥಿನಿ ಜತೆ ಬೆಳಗಾವಿಯಲ್ಲಿ ಶಿಕ್ಷಕನ ಪ್ರೇಮದಾಟ: ಖಾಸಗಿ ವಿಡಿಯೋ ವೈರಲ್​

    ‘ನಾ ನಾಯಕಿ’ ಸಮಾವೇಶಕ್ಕೆ ಖಡಕ್​ ಎಂಟ್ರಿ ಕೊಟ್ಟ ಪ್ರಿಯಾಂಕಾ! ವಿಶೇಷ ಯೋಜನೆ ಘೋಷಿಸುತ್ತಲೇ ರಾಜಕೀಯದಲ್ಲಿ ಸ್ತ್ರೀಶಕ್ತಿಯ ಮಹತ್ವ ಸಾರಿದ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts