More

    ರಾಜ್ಯದ 5 ನಗರಕ್ಕೆ ವಿಮಾನ ಸೇವೆ

    ಬೆಂಗಳೂರು: ದೇಶದ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನಪಡೆಯುವತ್ತ ರಾಜ್ಯ ಮುನ್ನುಗುತ್ತಿದ್ದು, ಕಲಬುರಗಿ ನಂತರ ಇದೀಗ ರಾಜ್ಯದ ಐದು ನಗರಗಳಲ್ಲಿ ಮುಂದಿನ 2 ವರ್ಷಗಳಲ್ಲಿ ವಿಮಾನಯಾನ ಸೇವೆ ಆರಂಭವಾಗಲಿದೆ.

    ನಾಗರಿಕ ವಿಮಾನಯಾನ ಇಲಾಖೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಂಗ್ಸ್ ಇಂಡಿಯಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್​ಸಿಂಗ್ ಖರೋಲಾ ರಾಜ್ಯದ ಎಲ್ಲ ಭಾಗಗಳಲ್ಲೂ ವಿಮಾನನಿಲ್ದಾಣವನ್ನು ನಿರ್ವಿುಸಲಾಗುತ್ತಿದೆ. ವಿಜಯಪುರ, ಶಿವಮೊಗ್ಗ, ಕಾರವಾರ, ಚಿಕ್ಕಮಗಳೂರು ಮತ್ತು ಬೀದರ್ ನಗರಗಳಲ್ಲಿ ಮುಂದಿನ 2 ವರ್ಷದಲ್ಲಿ ವಿಮಾನಯಾನ ಸೇವೆ ಆರಂಭಿಸಲಾಗುತ್ತದೆ ಎಂದು ಹೇಳಿದರು.

    5 ವರ್ಷದಲ್ಲಿ 40 ನಿಲ್ದಾಣದಲ್ಲಿ ಸೇವೆ: ದೇಶದಲ್ಲಿ ವಿಮಾನಯಾನ ಸೇವೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡಲಾಗುತ್ತಿದೆ. ಕಳೆದ 5 ವರ್ಷದಲ್ಲಿ ದೇಶದ 40 ವಿಮಾನನಿಲ್ದಾಣಗಳಲ್ಲಿ ವಿಮಾನಯಾನ ಸೇವೆಗೆ ಚಾಲನೆ ನೀಡಲಾಗಿದೆ. ಮುಂದಿನ 5 ವರ್ಷದಲ್ಲಿ ಆ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುತ್ತದೆ. ಅದರ ಜತೆಗೆ ವಿಮಾನನಿಲ್ದಾಣ ಮತ್ತು ಹೆಲಿಪ್ಯಾಡ್​ಗಳ ನಿರ್ವಣವನ್ನು ಹೆಚ್ಚಿಸಲಾಗುವುದು ಎಂದರು.

    ರಾಜ್ಯ ಸರ್ಕಾರವೂ ಸಿದ್ಧವಿದೆ: ರಾಜ್ಯದ ಇತರ ಕಡೆ ವಿಮಾನಯಾನ ಸೇವೆ ಆರಂಭಿಸುವ ಕುರಿತಂತೆ ಪ್ರತಿಕ್ರಿಯಿಸಿರುವ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ವಿಮಾನನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಮುಂದಿನ 2 ವರ್ಷಗಳಲ್ಲಿ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts