More

    ಭಾರತೀಯ ಯುದ್ಧ ವಿಮಾನಗಳಿಗೆ ಆಗಸದಲ್ಲೇ ಇಂಧನ ಪೂರೈಸಿದ ಯುಎಇ ವಾಯುಪಡೆ

    ನವದೆಹಲಿ: ತಡೆರಹಿತ ಹಾರಾಟ ನಡೆಸುತ್ತಿದ್ದ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ವಾಯುಪಡೆಯ ವಿಮಾನದಿಂದ ಇಂಧನ ಪೂರೈಕೆ ಮಾಡಲಾಗಿದೆ.

    ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕಾಗಿ ಈಜಿಪ್ಟ್ ದೇಶಕ್ಕೆ ಸುಮಾರು 6 ಗಂಟೆಗಳ ತಡೆರಹಿತ ಹಾರಾಟ ನಡೆಸಲಾಗಿತ್ತು. ಸುಖೋಯ್ ಸು-30 ಎಂಕೆಐ ಫೈಟರ್‌ಜೆಟ್‌ಗಳಿಗೆ ಯುಎಇ ವಾಯು ಪಡೆಯ ಎಂಆರ್​ಟಿಟಿ ವಿಮಾನ ಇಂಧನ ಸರಬರಾಜು ಮಾಡಿತು.

    ಈ ವಿಮಾನ ಇಂಧನ ತುಂಬುವಿಕೆ ಕಾರ್ಯವನ್ನು ಭಾರತೀಯ ವಾಯುಪಡೆಯು ಮುಕ್ತವಾಗಿ ಪ್ರಶಂಸಿಸಿದೆ. ಈ ಮಾಹಿತಿಯನ್ನು ಇಂಡಿಯನ್ ಏರ್​ ಫೋರ್ಸ್​ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮನೆಯಲ್ಲೇ ಶವವಾಗಿ ಪತ್ತೆಯಾದ ಹಿರಿಯ ನಟ ರೈಮೋಹನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts