More

    ಪಂಜಾಬ ಮಾದರಿಯಲ್ಲಿ ಕಬ್ಬಿನ ಬೆಲೆ ನಿಗದಿಮಾಡಿ : ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

    ಬಾಗಲಕೋಟೆ : ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಪಂಜಾಬ ಮಾದರಿಯಲ್ಲಿ ಪ್ರತಿ ಟನ್‌ಗೆ 3800 ಎಫ್‌ಆರ್‌ಪಿ ಗಳಂತೆ ಕಬ್ಬಿಗೆ ಬೆಲೆ ನಿಗದಿ ಪಡಿಸಬೇಕು ಹಾಗೂ ಬಾಕಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
    ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಎಎಪಿ ಕಾರ್ಯಕರ್ತರು ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ರಾಜ್ಯದಲ್ಲಿ ನೆರೆ, ಪ್ರವಾಹ, ಬರ ಸೇರಿದಂತೆ ಪಾಕೃತಿಕ ವಿಕೋಪದಿಂದ ಸಂಕಷ್ಟದಲ್ಲಿ ಇದ್ದಾರೆ. ಗೊಬ್ಬರ, ಬೀಜದ ಬೆಲೆ, ಕಾರ್ಮಿಕರ ವೇತನ ಎಲ್ಲವು ದ್ವಿಗುಣಗೊಂಡಿವೆ. ಸದ್ಯ ನಿಗದಿಯಾಗಿರುವ ಎಫ್‌ಆರ್‌ಪಿ ಬೆಲೆ ರೈತರಿಗೆ ಅನುಕೂಲವಾಗುವದಿಲ್ಲ. ಪ್ರತಿ ಟನ್‌ಗೆ ಪಂಜಾಬ ಮಾದರಿ 3800 ರೂ. ಬೆಲೆ ನಿಗದಿ ಮಾಡಿ ಹಂಗಾಮು ಆರಂಭಿಸಬೇಕು. ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದರು ರಾಜ್ಯ ಸರ್ಕಾರ ನಿರವ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದಿನ ಪ್ರಧಾನಿ ದಿ. ಲಾಲ್ ಬಾಹದ್ದೂರ ಶಾಸ್ತ್ರೀ ಜೈ ಜವಾನ-ಜೈ ಕಿಸಾನ್ ಘೋಷಣೆ ಮಾಡಿ ರೈತರಿಗೆ ಬೆನ್ನಿಗೆ ನಿಂತಿದ್ದರು. ಆದರೇ ಇಂದಿನ ರಾಜ್ಯ, ಕೇಂದ್ರ ಸರ್ಕಾರ ಜೈ ಜವಾನ್ ಜೈ ವ್ಯಾಪಾರಿ ಅಂತ ನಡೆದುಕೊಳ್ಳುತ್ತಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರತು ಪಡಿಸಿ ಆಡಳಿತ ನಡೆಸುತ್ತಿರುವ ಸ್ಥಳೀಯ ಪಕ್ಷಗಳ ಸರ್ಕಾರಗಳು ನ್ಯಾಯಯುತವಾಗಿ ಬೆಲೆ ನೀಡುತ್ತಿವೆ. ಉಪ ಉತ್ಪನ್ನಗಳ ಲಾಭಾಂಶದಲ್ಲಿ ಪಾಲು ನೀಡುತ್ತೀವೆ. ಎಎಪಿ ಆಡಳಿತವಿರುವ ಪಂಜಾಬ್ ಸರ್ಕಾರ ಇದಕ್ಕೆ ಮಾದರಿ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಬೇಕು. ಕನಿಷ್ಠ ರಾಜ್ಯದಲ್ಲಿ ಪ್ರತಿ ಟನ್‌ಗೆ 3500 ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
    ಜಿ.ಪಂ ಮಾಜಿ ಉಪಾಧ್ಯಕ್ಷ, ಎಎಪಿ ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಲಾಭಿಗೆ ಸರ್ಕಾರ ಮಣಿಯುತ್ತಿದೆ. ಕಾರ್ಖಾನೆ ಮಾಲೀಕರು ರೈತರಿಗೆ ಮೋಸ ಮಾಡುತ್ತಿದ್ದಾರೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ನ್ಯಾಯಯುತ ಬೆಲೆ ನೀಡಬೇಕು. ಬಿಕ್ಕಟ್ಟು ಬಗೆ ಹರಿಸಬೇಕು ಎಂದು ತಿಳಿಸಿದರು.

    ಮಾಧವಿ ರಾಠೋಡ, ಭಾಗ್ಯಾ ಬೆಟಗೇರಿ, ಶಿಲ್ಪಾ ಕಾಳೆ, ಸುಭಾಸ ಶಿರಬೂರ, ಅರವಿಂದ ಮುಚಖಂಡಿ, ವಿರೇಶ ಬಣಗಾರ, ಅರ್ಜುನ ಹಲಗಿಗೌಡರ, ಡಾ.ಎಲ್.ಸಿ.ಪಾಟೀಲ, ಶಿವಾನಂದ ಕಟ್ಟಿಮನಿ, ಕೆ.ಎಂ.ಕಲಾದಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts