More

    ರೂಗಿ- ಮುಧೋಳ ಒಳ ರಸ್ತೆ ಸರಿಪಡಿಸಿ

    ಮುಧೋಳ: ಗುಲಗಾಲಜಂಬಗಿ ಗ್ರಾಪಂ ವ್ಯಾಪ್ತಿಯ ರೂಗಿ-ಮುಧೋಳ ಒಳ ರಸ್ತೆಗೆ ಮರುಡಾಂಬರೀಕರಣ ಮಾಡಿ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಯಾದವಾಡ ಕ್ರಾಸ್ ಬಳಿ ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ವಿನೋದ ಹತ್ತಳ್ಳಿಗೆ ಮನವಿ ಸಲ್ಲಿಸಿದರು.

    ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷ ಆರ್.ಬಿ. ತಿಮ್ಮಾಪುರ ಮಾತನಾಡಿ, ಗುಲಗಾಲಜಂಬಗಿ, ರೂಗಿ, ಮೆಟಗುಡ್ಡ, ಸಿಂಗಾಪುರ, ಬೊಮ್ಮನಬುದ್ದಿ ಗ್ರಾಮಗಳ ಅನುಕೂಲಕ್ಕಾಗಿ ಮುಧೋಳ-ಯಾದವಾಡ ಬಳಿಯ ರೂಗಿ ಗ್ರಾಮದ ಒಂದು ಕಿಲೋಮೀಟರ್ ಒಳರಸ್ತೆಗೆ ಅವೈಜ್ಞಾನಿಕವಾಗಿ ಡಾಂಬರೀಕರಣ ಮಾಡಲಾಗಿದ್ದು, ತಿಂಗಳಲ್ಲೇ ಕಿತ್ತು ಹೋಗಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಅಲ್ಲದೆ, ಕಳಪೆ ಕಾಮಗಾರಿ ನಡೆಸಿ ಕೆಲವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಕಂಡುಬಂದಿದ್ದು, ಕೂಡಲೇ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು 15 ದಿನಗಳಲ್ಲೇ ಉತ್ತಮ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದರು.

    ತಾಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ ಮಾತನಾಡಿ, ಮುಧೋಳಕ್ಕೆ ತೆರಳಲು ಗುಲಗಾಲಜಂಬಗಿ, ರೂಗಿ, ಮೆಟಗುಡ್ಡ, ನಿಂಗಾಪುರ, ಬೊಮ್ಮನಬುದ್ದಿ ಗ್ರಾಮಗಳ ರೈತರಿಗೆ ಅಂದಾಜು 3 ಕಿ.ಮೀ. ರಸ್ತೆಯ ಪ್ರಯಾಣ ಕಡಿಮೆಯಾಗುತ್ತದೆ. ಹಣ ಹಾಗೂ ಸಮಯವೂ ಉಳಿಯುತ್ತದೆ. ಕೂಡಲೇ ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದರೆ ಮುಧೋಳದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

    ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಉದಯಸಿಂಗ ಪಡತಾರೆ, ಗ್ರಾಪಂ ಅಧ್ಯಕ್ಷ ಮಂಜುನಾಥ ಉಪ್ಪಾರ, ಅಸಂಘಟಿತ ಕಾಂಗ್ರೆಸ್ ವಲಯ ಮುಖಂಡ ಸದಾಶಿವ ಹೊಸಮನಿ, ಕೃಷ್ಣಪ್ಪ ಕನಕರಡ್ಡಿ, ಸವಿತಾ ಚವಲಿ, ಶೋಭಾ ಮ್ಯಾಗೇರಿ, ಹಲಗತ್ತಿ, ಭೀಮಸಿ ಸರ್ಕಾರಕುರಿ ಸೇರಿ ವಿವಿಧ ಗಾಮಗಳ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts