More

    ಹೊಸ ವರ್ಷಕ್ಕೆ ಡ್ರಗ್ಸ್ ಪೂರೈಕೆಗೆ ಸಜ್ಜಾಗಿದ್ದ ಐವರು ಪೆಡ್ಲರ್‌ಗಳು ಸಿಸಿಬಿ ಬಲೆಗೆ

    ಬೆಂಗಳೂರು: ಹೊಸ ವರ್ಷಾಚರಣೆಗೆ ಡ್ರಗ್ಸ್ ಪೂರೈಕೆ ಮಾಡಲು ಸಜ್ಜಾಗಿದ್ದ ಐವರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 28 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ.

    ಆಡುಗೋಡಿ ಸಮೀಪದ ನಿವಾಸಿಗಳಾದ ಲಿಂಗೇಶ್ ನಾರಾಯಣನ್, ಸೂರಜ್, ಶಾರುಖ್ ಖಾನ್, ಕೇರಳದ ಹಿರಾನ್, ಶ್ರೇಯಸ್ ಕೆ. ಪ್ರಸಾದ್ ಹಾಗೂ ರಾಹುಲ್ ಬಂಧಿತರು. 3.1 ಕೆ.ಜಿ. ಗಾಂಜಾ, 200 ಗ್ರಾಂ ಎಡಿಎಂಎ ಮತ್ತು ಮೊಬೈಲ್ ಸೇರಿ 28 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆಡುಗೋಡಿ, ಅಮೃತಹಳ್ಳಿ ಮತ್ತು ಕೆಂಗೇರಿ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಗಳ ಪೈಕಿ ಲಿಂಗೇಶ್ ನಾರಾಯಣ್, ಡಿಜೆ ಆಗಿದ್ದರೆ, ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸೂರಜ್ ಕೆಲಸ ಮಾಡುತ್ತಿದ್ದ. ಡಿಜಿಟೆಲ್ ಕಂಪನಿಯಲ್ಲಿ ಶಾರುಖ್ ಉದ್ಯೋಗದಲ್ಲಿದ್ದ. ಒಡಿಶಾ, ಆಂಧ್ರಪ್ರದೇಶ ಹಾಗೂ ಕೇರಳದ ಡ್ರಗ್ಸ್ ಮಾರಾಟ ಜಾಲದಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬಳಿಕ ನಗರದಲ್ಲಿ ದುಬಾರಿ ಬೆಲೆಗೆ ಈ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ರೆಸಾರ್ಟ್, ಹೋಟೆಲ್ ಮತ್ತು ಪಬ್‌ಗಳಲ್ಲಿ ಸೂರಜ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದು, ಆ ಪಾರ್ಟಿಗಳಿಗೆ ನಾರಾಯಣ್ ಡಿಜೆಯಾಗಿದ್ದ. ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts