More

    ತಾಯಿ ಜತೆ ಐದು ತಿಂಗಳ ಮರಿಯಾನೆ ತುಂಟಾಟ

    ಶಿವಮೊಗ್ಗ: ಸಕ್ರೆಬೈಲ್ ಆನೆ ಬಿಡಾರದಲ್ಲಿ ಐದು ತಿಂಗಳ ಮರಿಯಾನೆ ತುಂಗಾ ಜಲಾಶಯದ ಹಿನ್ನೀರಿನಲ್ಲಿ ಆಟವಾಡಿರುವ ವಿಡಿಯೋ ವೈರಲ್ ಆಗಿದೆ. ವಾರಾಂತ್ಯ ವಿಹಾರಕ್ಕೆ ಸಕ್ರೆಬೈಲು ಆನೆ ಬಿಡಾರಕ್ಕೆ ತೆರಳಿದ್ದ ಪ್ರವಾಸಿಗರು ಹಿನ್ನೀರಿನಲ್ಲಿ ಮರಿಯಾನೆಯ ತುಂಟಾಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

    ಪ್ರತಿದಿನದಂತೆ ಭಾನುವಾರವೂ ಆನೆಗಳಿಗೆ ಸಕ್ರೆಬೈಲ್ ಬಿಡಾರದ ಬಳಿ ಹಿನ್ನೀರಿನಲ್ಲಿ ಮಾವುತರು ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಕುಂತಿ ಆನೆಯ ಐದು ತಿಂಗಳ ಮರಿ ನೀರಿನಲ್ಲಿ ಚೆಲ್ಲಾಟವಾಡಿದೆ. ತಾಯಿ ಆನೆ ನೀರಿನಲ್ಲಿ ಮಲಗಿದ್ದರೆ ಮರಿಯಾನೆ ತಾಯಿ ಮೇಲೆ ಹತ್ತುವ ಸಾಹಸ ಮಾಡಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.
    ವಾರಾಂತ್ಯ ಸೇರಿ ಇತ್ತೀಚಿನ ದಿನಗಳಲ್ಲಿ ಸಕ್ರೆಬೈಲ್‌ನಲ್ಲಿ ಪ್ರವಾಸಿಗರನ್ನು ಆನೆಗಳು ಹೆಚ್ಚೆಚ್ಚು ಆಕರ್ಷಣೆ ಮಾಡುತ್ತಿವೆ. ಬಿಸಿಲಿನ ಧಗೆ ಜತೆಗೆ ಸ್ನಾನ ಮಾಡಿಸಿಕೊಳ್ಳಲು ನೀರಿಗೆ ಇಳಿಯುವ ಆನೆಗಳ ಜತೆ ಪ್ರವಾಸಿಗರು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಂತೆ ಭಾನುವಾರ ಬೆಳಗ್ಗೆ ಕುಂತಿ ಆನೆಗೆ ಸ್ನಾನ ಮಾಡಿಸಲು ಮಾವುತ ಕರೆದೊಯ್ದಿದ್ದು ತಾಯಿಯೊಂದಿಗೆ ತೆರಳಿದ ಮರಿಯಾನೆ ನೀರಿನಲ್ಲಿ ಆಟ ಆಡುತ್ತಾ ತಾಯಿಯ ಮೇಲೆ ಹತ್ತಿ ಕುಣಿದಾಡುತ್ತಿರುವ ಮರಿ ಆನೆ ಎಂಜಾಯ್ ಮಾಡಿದ್ದು ಪ್ರವಾಸಿಗರು ವಿಶೇಷ ದೃಶ್ಯವನ್ನು ಕಣ್ತುಂಬಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts