More

    ಫಿಶ್‌ಮಿಲ್ ಸ್ಥಗಿತ, ಐಸ್‌ಪ್ಲಾಂಟ್ ಬಂದ್

    ಸುಭಾಸ ಧೂಪದಹೊಂಡ ಕಾರವಾರ

    ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಕೋಟ್ಯಂತರ ರೂ. ಆಸ್ತಿಗಳು ಕಾರವಾರದ ಬೈತಖೋಲ್‌ನಲ್ಲಿ ಪಾಳು ಬಿದ್ದಿವೆ. ನಿಗಮದ ನೂತನ ಅಧ್ಯಕ್ಷ ಮಂಕಾಳ ವೈದ್ಯರಿಂದ ಅವ್ಯವಸ್ಥೆಗೆ ಚಿಕಿತ್ಸೆ ಆಪೇಕ್ಷಿಸುತ್ತಿವೆ.

    ಬೈತಖೋಲ್‌ನ ಫಿಶ್‌ಮಿಲ್ ಸ್ಥಗಿತವಾಗಿ ದಶಕವಾಗುತ್ತ ಬಂದಿದೆ. ಐಸ್ ಪ್ಲಾಂಟ್ ಕೂಡ ಮೂರು ವರ್ಷದ ಹಿಂದೇಯೇ ಕಾರ್ಯನಿರ್ವಹಣೆ ನಿಲ್ಲಿಸಿದೆ. ಎರಡೂ ಕಟ್ಟಡಗಳು ಪಾಳು ಬಿದ್ದು, ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿವೆ. ಬೈತಖೋಲ್‌ನ ಕೆಎ್ಡಿಸಿ ಕಚೇರಿ ಕಟ್ಟಡ ಇಂದೋ ನಾಳೆಯೂ ಬೀಳುವ ಸ್ಥಿತಿಯಲ್ಲಿದೆ. ಜಮೀನು ಅತಿಕ್ರಮಣವಾಗುತ್ತಿದೆ.

    ಡೀಸೆಲ್ ಪಂಪ್ ಮಾತ್ರ ಕಾರವಾರದಲ್ಲಿ ಕೆಎ್ಡಿಸಿಯ ಅಸ್ತಿತ್ವವನ್ನು ಹಿಡಿದುಕೊಂಡಿದೆ. ಬೈತಖೋಲ್ ಬಂದರಿಗೆ ಹೊರಗಿನ ಖಾಸಗಿ ಪ್ಲಾಂಟ್‌ನಿಂದ ಐಸ್ ತರಬೇಕಿದೆ. ಮಾರಾಟವಾಗದೆ ಉಳಿದ ಸಣ್ಣಪುಟ್ಟ ಮೀನುಗಳನ್ನು ಇಲ್ಲಿನ ಮೀನೆಣ್ಣೆ ಘಟಕಕ್ಕೆ ನೀಡಿ ಬೈತಖೋಲ್ ಮೀನುಗಾರರು ಅಲ್ಪ ಆದಾಯ ಪಡೆಯುತ್ತಿದ್ದರು. ಈಗ ಮಾರಾಟವಾಗದ ಮೀನುಗಳನ್ನು ಮರಳಿ ಸಮುದ್ರಕ್ಕೆ ಎಸೆಯುವ ದುಸ್ಥಿತಿ ಇದೆ.

    9 ಲಕ್ಷ ವಿದ್ಯುತ್ ಬಿಲ್ ಬಾಕಿ: ಫಿಶ್ ಮಿಲ್ ಲೀಸ್ ಪಡೆದಿದ್ದ ಹೈದ್ರಾಬಾದ್ ಕಂಪನಿ ಹಾಗೂ ನಿಗಮ ನಡುವಿನ ವಿವಾದ ನ್ಯಾಯಾಲಯದಲ್ಲಿದೆ. ಐಸ್ ಪ್ಲಾಂಟ್ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿತ್ತು. 2020 ರಲ್ಲಿ ಕೋವಿಡ್ ಸಂದರ್ಭದಲ್ಲಿ ಬಂದಾಗಿದ್ದು, ಮತ್ತೆ ಬಾಗಿಲು ತೆರೆದಿಲ್ಲ. ಪ್ಲಾಂಟ್‌ನ 9 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ. ಬಿಲ್ ಪಾವತಿಯಾಗದೆ ನೇರವಾಗಿ ಅಥವಾ ಖಾಸಗಿಯಿಂದ ಮಿಲ್ ಪ್ರಾರಂಭ ಸಾಧ್ಯವಿಲ್ಲ. ಈ ಬಗ್ಗೆ ಹೆಸ್ಕಾಂ ಜತೆಗೆ ಚೌಕಾಶಿ ನಡೆದಿದೆ ಎನ್ನುತ್ತಾರೆ ಕೆಎ್ಡಿಸಿ ಅಧಿಕಾರಿಗಳು.

    ದುರಂತ ಕತೆ: ಕಾರವಾರದಲ್ಲಿ ಉನ್ನತಿಗೆ ಏರಿದ್ದ ನಿಗಮ ನಂತರ ದುಸ್ಥಿತಿಗೆ ತಲುಪಿರುವುದು ದುರಂತ ಇತಿಹಾಸ. ಇಂಡೋ-ನಾರ್ವೇ ಮೀನುಗಾರಿಕೆ ಯೋಜನೆಯಲ್ಲಿ 1971 ರಲ್ಲಿ ಕೆಎ್ಡಿಸಿಯು ಪ್ರಾರಂಭವಾಯಿತು. ಕಾರವಾರ ಬೈತಖೋಲ್ ಬಂದರಿನ ಪ್ರದೇಶದ ಸಂಪೂರ್ಣ ಜಮೀನನ್ನು ಕೆಎ್ಡಿಸಿಗೆ ಹಸ್ತಾಂತರಿಸಲಾಗಿತ್ತು. ಆಗಲೇ ಕಾರವಾರ ಬೈತಖೋಲ್‌ನಲ್ಲಿ 20 ಟನ್ ಸಾಮರ್ಥ್ಯದ ಶೀಥಲೀಕರಣ ಘಟಕ ಕಾರ್ಯನಿರ್ವಹಿಸುತ್ತಿತ್ತು.

    1981ರ ಸುಮಾರಿಗೆ ಕಾರವಾರದಲ್ಲಿ ಫಿಶ್ ಮಿಲ್, ಐಸ್ ಪ್ಲಾಂಟ್‌ಗಳು ಪ್ರಾರಂಭವಾದವು. ಸುಮಾರು 60 ಕ್ಕೂ ಅಧಿಕ ಜನ ಕೆಎ್ಡಿಸಿಯಡಿ ಕಾರ್ಯನಿರ್ವಹಿಸುತ್ತಿದ್ದರು. ಕೆಎ್ಡಿಸಿ ರಾಜ್ಯದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಲ್ಲದೆ, ಮೀನು ಉತ್ಪನ್ನಗಳ ಮೌಲ್ಯವರ್ಧನೆಗೆ ಕಾರಣವಾಗಿತ್ತು. ಮೀನುಗಾರರ ಆದಾಯ ಹೆಚ್ಚಲು ಕಾರ್ಯನಿರ್ವಹಿಸಿತ್ತು ಎನ್ನುತ್ತಾರೆ ಹಿರಿಯ ಮೀನುಗಾರರ ಮುಖಂಡರು.

    ಇಂಡೋ-ನಾರ್ವೇ ಯೋಜನೆಯ ಅನುದಾನ ಸ್ಥಗಿತವಾದ ನಂತರ ಕೆಎ್ಡಿಸಿಗೂ ನಷ್ಟದ, ಕಷ್ಟದ ಕಾಲ ಶುರುವಾಯಿತು. ನೌಕರರಿಗೆ ವೇತನ ನೀಡಲೂ ಸಾಧ್ಯವಾಗುತ್ತಿರಲಿಲ್ಲ. 1991 ರಲ್ಲಿ ಶೇ.75 ರಷ್ಟು ಉದ್ಯೋಗಿಗಳಿಗೆ ವಿಆರ್‌ಎಸ್ ೋಷಿಸಲಾಯಿತು. ಮುಂದೆ ಫಿಶ್ ಮಿಲ್, ಐಸ್ ಪ್ಲಾಂಟಗಳನ್ನೂ ಖಾಸಗಿಗೆ ಲೀಸ್ ಮೇಲೆ ಕೊಡಲಾಯಿತು ಎಂದು ಬೈತಖೋಲ್ ಮೀನುಗಾರರು ನೆನಪಿಸಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts