More

    ದಿಢೀರ್ ಕಡಲಿಗಿಳಿದ ಮೀನುಗಾರರು, ಮೀನುಗಾರಿಕೆ ಸ್ಥಗಿತ ನಿರ್ಧಾರದಿಂದ ಯು ಟರ್ನ್

    ಗಂಗೊಳ್ಳಿ: ಸೀಮಿತ ಬೋಟ್‌ಗಳಿಗಷ್ಟೇ ಮೀನುಗಾರಿಕೆ ಅನುಮತಿ ನೀಡಿರುವ ಜಿಲ್ಲಾಧಿಕಾರಿ ನಿರ್ದೇಶನದ ಗೊಂದಲದಿಂದ ಮೀನುಗಾರಿಕೆ ಸ್ಥಗಿತಗೊಳಿಸಲು ಮುಂದಾಗಿದ್ದ ಮೀನುಗಾರರು ಭಾನುವಾರ ದಿಢೀರನೆ ಮೀನುಗಾರಿಕೆಗೆ ತೆರಳಿದ್ದಾರೆ.

    ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ದಿನಕ್ಕೆ 8 ಬೋಟ್‌ಗಳಿಂದ ಮಾತ್ರ ಮೀನು ಇಳಿಸಲು ಅನುಮತಿ ನೀಡಲಾಗಿತ್ತು. ಮೀನುಗಾರಿಕೆ ಮುಗಿಸಿ ಬಂದ ಬಳಿಕ ಬಂದರಿನಲ್ಲಿ ಹರಾಜು ಅಥವಾ ಮಾರಾಟಕ್ಕೆ ಅವಕಾಶ ನೀಡಿಲ್ಲ. ಮೀನುಗಳನ್ನು ನೇರವಾಗಿ ವಾಹನಗಳಿಗೆ ತುಂಬಿಸಿ, ಸಾಗಿಸಬೇಕೆಂಬ ಜಿಲ್ಲಾಡಳಿತ ನೀಡಿರುವ ಆದೇಶ ಪಾಲನೆಗೆ ತೊಡಕಾಗಿರುವುದು ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲಕ ಕಾರ್ಯಾಚರಿಸುತ್ತಿದ್ದ ಬೋಟುಗಳ ಮೀನುಗಾರರು ಚಟುವಟಿಕೆ ಸ್ಥಗಿತಗೊಳಿಸಲು ಶನಿವಾರ ನಿರ್ಧರಿಸಿದ್ದರು. ಆದರೆ ಭಾನುವಾರ ಮುಂಜಾನೆ ಬಹುತೇಕ ಎಲ್ಲ ಬೋಟುಗಳು ಮತ್ತು ಮೂರು ಪರ್ಸಿನ್ ಬೋಟುಗಳು ಕಡಲಿಗಿಳಿದಿದ್ದು, ಮೀನುಗಾರರು ಮತ್ಸೃ ಬೇಟೆಯಲ್ಲಿ ತೊಡಗಿದ್ದಾರೆ.

    ಇನ್ನೊಂದೆಡೆ ಬೆಳಗ್ಗೆ ಹೋದ ಮೀನುಗಾರಿಕಾ ಬೋಟುಗಳು ವಾಪಸ್ ಬಂದರಿಗೆ ಬರುವಾಗ ಶನಿವಾರದಂತೆ ಭಾನುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಪರಸ್ಪರ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್ ಧರಿಸದೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸದೆ ಮೀನುಗಾರರು ಹಾಗೂ ಸಾರ್ವಜನಿಕರು ಅತ್ತಿತ್ತ ಓಡಾಡುತ್ತಿರುವ, ಮೀನು ಖರೀದಿಗೆ ಜನರು ಗುಂಪು ಸೇರುತ್ತಿರುವ ದೃಶ್ಯ ಬಂದರು ಪ್ರದೇಶದಲ್ಲಿ ಕಂಡುಬಂತು. ಸ್ಥಳೀಯರಷ್ಟೇ ಅಲ್ಲದೆ ಹೊರಗಿನವರೂ ಬಂದರಿಗೆ ಆಗಮಿಸಿದ್ದರಿಂದ ಅಂತರ ಕಾಪಾಡಲು ಸಾಧ್ಯವಾಗಿಲ್ಲ.

    ಇದರಿಂದ ಬಂದರಿನಲ್ಲಿ ಆತಂಕದ ವಾತಾವರಣ ಉಂಟಾಯಿತು. ಬಂದರಿನಲ್ಲಿ ಜನಜಂಗುಳಿ ಉಂಟಾಗದಂತೆ ನೋಡಿಕೊಳ್ಳಲು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಧ್ಯವಾಗಿಲ್ಲ. ಉತ್ತಮ ಜಾತಿಯ ಮೀನುಗಳನ್ನು ಮಾತ್ರ ವಾಹನಗಳಿಗೆ ತುಂಬಿಸಿ ಸಾಗಿಸಲು ಅನುಮತಿ ನೀಡುತ್ತಿರುವ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಉಳಿದ ಸಣ್ಣಪುಟ್ಟ ಮೀನುಗಳನ್ನು ನದಿಗೆ ಎಸೆಯಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts