More

    ಅಂಬ್ಲಿಗೊಳದಲ್ಲಿ ಮೀನು ಬೇಟೆ ಪೈಪೋಟಿ

    ಆನಂದಪುರ: ಗೌತಮಪುರ ವ್ಯಾಪ್ತಿಯ ಗಡಿ ಭಾಗದ ಬಿ.ಹೊಸೂರು ಗ್ರಾಮದಲ್ಲಿರುವ ಅಂಬ್ಲಿಗೊಳ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕೋಡಿ ಕಾಲುವೆ ಮೂಲಕ ಹೊರ ಹರಿಯುತ್ತಿದೆ.
    ಕಾಲುವೆಯಲ್ಲಿ ಪ್ರವಾಹದಂತೆ ಹರಿಯುವ ಕೆಂಪನೆಯ ನೀರಿನಲ್ಲಿ ಭಾರಿ ಗಾತ್ರದ ಮೀನುಗಳು ತೇಲಿ ಹೋಗುತ್ತಿದ್ದು, ಮೀನು ಹಿಡಿಯಲು ಸುತ್ತಮುತ್ತಲ ಗ್ರಾಮಸ್ಥರು ಪೈಪೋಟಿಯಲ್ಲಿ ತೊಡಗಿದ್ದಾರೆ. ಆನಂದಪುರ-ಶಿಕಾರಿಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಿ.ಹೊಸೂರು ಗ್ರಾಮದಲ್ಲಿ ಅಂಬ್ಲಿಗೊಳ ಜಲಾಶಯವಿದೆ. ಗೌತಮಪುರ ಮತ್ತು ನಾಡವಳ್ಳಿಯಿಂದ ಹರಿದು ಅಂಬ್ಲಿಗೊಳ ಕಡೆಗೆ ಸಾಗುವ ಹೊಳಗೆ ಅಡ್ಡಲಾಗಿ ಈ ಜಲಾಶಯ ನಿರ್ಮಿಸಲಾಗಿದೆ. ಸಂಪೂರ್ಣ ನೀರಾವರಿ ಉದ್ದೇಶದಿಂದ ನಿರ್ಮಿಸಿರುವ ಈ ಜಲಾಶಯ ಸಾಗರ ತಾಲೂಕಿನ ಚೆನ್ನಾಪುರ, ನಾಡವಳ್ಳಿ, ದೊಡ್ಡಬ್ಯಾಣ, ಬಿ.ಹೊಸೂರು, ಶಿಕಾರಿಪುರ ತಾಲೂಕಿನ ಅಂಬ್ಲಿಗೊಳ, ಸಾಲೂರು, ಚಿಕ್ಕಸಾಲೂರು ಸೇರಿದಂತೆ ಇನ್ನಿತರ ಗ್ರಾಮಗಳ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಜೀವಜಲ ಆಗಿದೆ.
    ಚಿಕ್ಕ ಜಲಾಶಯ ಇದಾಗಿದ್ದು ಮೇಲ್ಭಾಗದಲ್ಲಿ ಓಡಾಡಲು ಯಾವುದೇ ನಿರ್ಬಂಧ ಇಲ್ಲ. ಭರ್ತಿಯಾದ ನೀರು ಹೊರ ಸಾಗಲು ಜಲಾಶಯದ ಎಡಗಡೆ ಕಾಲುವೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಸುಮಾರು 15 ಅಡಿ ಎತ್ತರಿಂದ ಉಕ್ಕಿ ಹರಿಯುವ ರಮಣೀಯ ದೃಶ್ಯ ಪ್ರವಾಸಿಗರ ಮನ ಸೆಳೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts