More

    ಮೈಸೂರಿನಲ್ಲಿ ಮೊದಲ ವರ್ಷಧಾರೆ ಸಿಂಚನ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಸಕ್ತ ಸಾಲಿನ ಮೊದಲ ಮಳೆ ಕೇವಲ 10 ನಿಮಿಷ ಕಾಲ ಸುರಿದು ಮಾಯವಾಯಿತು.


    ಸಂಜೆ 5.30ರ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಗಾಳಿ ಬೀಸಲು ಶುರುವಾಯಿತು. ಬಿಸಿಲಿನ ಧಗೆ ಕಡಿಮೆಯಾಗಿ ತಂಪು ಗಾಳಿ ಬೀಸಿತು.


    6.20ಗಂಟೆ ಸುಮಾರಿಗೆ ಮಳೆ ಜಿನುಗಲು ಆರಂಭಿಸಿತು. ಇದು ಬಿಸಿಲಿನಿಂದ ಬಸವಳಿದು ಹೋಗಿದ್ದ ಜನರಿಗೆ ತಂಪೆರೆಯಿತು. ರಸ್ತೆಯಲ್ಲಿ ಕೊಂಚ ನೀರು ಹರಿದಾಡಿತು. ವಿಜಯನಗರ, ಜಯಲಕ್ಷ್ಮೀಪುರಂನಲ್ಲಿ ಸುಮಾರಾಗಿ ಮಳೆ ಆಗಿದೆ.

    ಚಾಮುಂಡಿಪುರಂ, ಲಕ್ಷ್ಮೀಪುರಂ, ವಿದ್ಯಾರಣ್ಯಪುರಂ ಕೇವಲ 1 ನಿಮಿಷ ಜಿಟಿ ಜಿಟಿ ಮಳೆ ಆಯಿತು. ಕೆಲ ಹೊತ್ತಿನ ಬಳಿಕ ಮಳೆ ಸ್ತಬ್ಧಗೊಂಡಿತು. ಇದರಿಂದ ಬಿಸಿಲಿನಿಂದ ಹೈರಾಣವಾಗಿ ಹೋಗಿರುವ ಸಾರ್ವಜನಿಕರಿಗೆ ನಿರಾಸೆ ಉಂಟಾಯಿತು. ದೊಡ್ಡ ಮಳೆಯ ನಿರೀಕ್ಷೆಯಲ್ಲಿದ್ದ ಜನರು, ಒಂದು ಗಂಟೆಯಾದರೂ ಮಳೆ ಸುರಿಯಲಿ ಎಂದು ಅಂದುಕೊಂಡಿದ್ದರು. ಆದರೆ, ಹೀಗೆ ಬಂದ ಮಳೆ ಹಾಗೇ ಹೋಗಿಬಿಟ್ಟಿತು.


    ನಗರದಲ್ಲಿ ಉರಿ ಬಿಸಿಲಿನ ಧಗೆ ಹೆಚ್ಚಾಗಿದೆ. ಬೆಳಗ್ಗೆ 11ರಿಂದ ಸಂಜೆ 4 ಗಂಟೆ ಹೊರಗಡೆ ತಿರುಗಾಡಲಾಗದಂತಹ ಸೂರ್ಯನ ಕೆಂಡದಂತಹ ಪ್ರಖರತೆ ಇದೆ. ಇದರಿಂದ ಜನರು ಕಂಗಾಲಾಗಿ ಹೋಗಿದ್ದಾರೆ.

    ಆದಾಗ್ಯೂ, ಯುಗಾದಿ ಹಬ್ಬ ಕಳೆದ ಬಳಿಕವೂ ಮಳೆ ಆಗಿಲ್ಲ. ಹೀಗಾಗಿ, ಆಕಾಶ ನೋಡುತ್ತಿರುವ ಸಾರ್ವಜನಿಕರು, ವರ್ಷಾಧಾರೆಯ ನಿರೀಕ್ಷೆಯಲ್ಲಿದ್ದರು. ಇಂದು ಸುರಿದ ಮಳೆ ಕೊಂಚ ಸಮಾಧಾನ ಉಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಳೆ ಆಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts