More

    ಪ್ರಥಮ ಪಿಯುಸಿ ಫಲಿತಾಂಶ ಮೇ 5ಕ್ಕೆ ಪ್ರಕಟ

    ಬೆಂಗಳೂರು: ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ 5.5.2020 ರಂದು, ಈಗಾಗಲೇ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಂಡಿರುವ ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದೆ.

    ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕಾಲೇಜು‌ ಮಟ್ಟದಲ್ಲಿಯೇ ನಿರ್ವಹಿಸಲು‌ ಮಾನದಂಡಗಳನ್ನು ಮುಂದೆ ತಿಳಿಸಲಾಗುವುದು ಎಂದೂ ಸಹ ಸುತ್ತೋಲೆ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಇನ್ನೆಷ್ಟು ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತೆ ಕರ್ನಾಟಕ? ಕಾರ್ಮಿಕರಿಗೆ ಯಾವತ್ತಿನಿಂದ ಸಿಗುತ್ತೆ ಕೆಲಸ?

    ಖಾಸಗಿ ಕಾಲೇಜುಗಳು ಈ ಸಾಲಿನಲ್ಲಿ‌ ಶುಲ್ಕ ಹೆಚ್ಚಿಸುವ ಹಾಗಿಲ್ಲ
    ಖಾಸಗಿ ಪಿಯು ಕಾಲೇಜುಗಳು ಇಂತಹ ಸಾಮಾಜಿಕ ಸಂಕಷ್ಟದ ಸಂದರ್ಭದಲ್ಲಿ ಅಸಹಾಯಕ ಪೋಷಕರಿಂದ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಒತ್ತಾಯಿಸಬಾರದು. ಇಚ್ಛಿಸುವ ಪೋಷಕರಿಂದ ಕಂತುಗಳ ಮೂಲಕ ಸ್ವೀಕರಿಸತಕ್ಕದ್ದು ಹಾಗೂ 2020-21 ನೇ ಸಾಲಿಗೆ ಯಾವುದೇ ಕಾರಣಕ್ಕೂ ಬೋಧನ ಶುಲ್ಕವನ್ನು ಹೆಚ್ಚಿಸಬಾರದೆಂದು ಇಲಾಖೆಯು ನಿರ್ದೇಶನ ನೀಡಿದೆ.

    ಇದನ್ನೂ ಓದಿ: ಮೇ 3ರ ನಂತರವಾದರೂ ಮದ್ಯದಂಗಡಿ ಓಪನ್​ ಆಗುತ್ತಾ? ಸಿಎಂ ಏನು ಹೇಳ್ತಾರೆ?

    ಒಂದು ವೇಳೆ ಈ ಬಗ್ಗೆ ದೂರುಗಳು ಬಂದಲ್ಲಿ, ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮಕ್ಕೆ ಮುಂದಾಗಲಾಗುವುದೆಂದು ಪದವಿಪೂರ್ವ ಶಿಕ್ಷಣ ನಿರ್ದೇಶಕರು ತಮ್ಮ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಮಾಸ್ಕ್​ ಧರಿಸದಿದ್ದರೆ ನೇರ ಜೈಲಿಗೆ, ಜತೆಗೆ ಭಾರಿ ದಂಡ! ಬಂದಿದೆ ಹೊಸ ನಿಯಮ…

    ಲಾಕ್​ಡೌನ್ ನಿಯಮಗಳನ್ನು ಗಾಳಿಗೆ ತೂರಿ ಪುತ್ರನ ವಿವಾಹ ನೆರವೇರಿಸಿದ ಮಾಜಿ ಶಾಸಕ; ಮಾಸ್ಕ್​ ಇರಲಿಲ್ಲ, ಸಾಮಾಜಿಕ ಅಂತರ ಪಾಲನೆಯಾಗಿಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts