More

    ಎನ್.ಎಸ್.ಅರುಣ್ ಕುಮಾರ್ ತಾಲೂಕಿಗೆ ಪ್ರಥಮ

    ಚನ್ನರಾಯಪಟ್ಟಣ : 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಪಟ್ಟಣದ ಜ್ಞಾನಸಾಗರ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎನ್.ಎಸ್.ಅರುಣ್ ಕುಮಾರ್, ಗಣಿತಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿ, 600 ಅಂಕಗಳಿಗೆ 588 ಅಂಕ ಪಡೆಯುವುದರೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ.

    ಪಟ್ಟಣದ ಜ್ಞಾನಸಾಗರ ಪಿಯು ಕಾಲೇಜು ಪ್ರತಿವರ್ಷ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. 2023-24ನೇ ಸಾಲಿನಲ್ಲೂ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಎನ್.ಎಸ್.ಅರುಣ್ ಕುಮಾರ್, ಗಣಿತಶಾಸ್ತ್ರ ಮತ್ತು ಗಣಕವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿ, 600 ಅಂಕಗಳಿಗೆ 588 ಅಂಕಗಳನ್ನು ಪಡೆದುಕೊಳ್ಳುವುದರೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇನ್ನುಳಿದಂತೆ ಎಚ್.ಎಸ್.ಲೇಖನಾ ಮತ್ತು ಸಿ.ಎಂ.ಮಗಧೀರ ಎಂಬ ವಿದ್ಯಾರ್ಥಿಗಳು 579 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಎಚ್.ಮೋಹಿತ್-577, ಹಿತ ಹಿಂದೂಸ್ಥಾನಿ-575, ಶ್ರೇಯಾ-575, ಎಂ.ಡಿ.ಚಿನ್ಮಯಿ-573 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 128 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಆ ಪೈಕಿ 75 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 53ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

    ವಾಣಿಜ್ಯ ವಿಭಾಗದಲ್ಲಿ ಜಿ.ಎನ್.ಅರುಣ್, ಮತ್ತು ಎಸ್.ಬಿ.ಯುಕ್ತಾ ಜೈನ್ 600 ಅಂಕಗಳಿಗೆ 585 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ್ದಾಳೆ. ಇನ್ನುಳಿದಂತೆ ಎಂ.ಚಿರಂತ್‌ಗೌಡ-584, ಎಚ್.ಎಸ್.ಅಕ್ಷರಾ-582 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಎಲ್.ಎನ್.ಕೀರ್ತನಾ-576, ಸಿ.ಎನ್.ಹೇಮವರ್ಷಿಣಿ-573 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 33 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ನಾಗೇಶ್ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ಕೆ.ನಾಗೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಭಾರತಿನಾಗೇಶ್, ಡೀನ್ ಡಾ.ಸುಜಾ ಫಿಲಿಪ್, ಆಡಳಿತಾಧಿಕಾರಿ ಸಿ.ಪಿ.ಫಿಇ್ಪ, ಹಾಗೂ ಜ್ಞಾನಸಾಗರ ಪಿಯು ಕಾಲೇಜಿನ ಉಪನ್ಯಾಸಕ ವೃಂದ ಅಭಿನಂದಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts