More

    ‘ಪೆಂಟಗನ್​’ ಚಿತ್ರದ ಮೊದಲ ಪಾತ್ರದ ಅನಾವರಣ …

    ಬೆಂಗಳೂರು: ‘ಪೆಂಟಗನ್​’ ಚಿತ್ರದ ಥೀಮ್ ಪೋಸ್ಟರ್​ಗಳನ್ನು ಕೆಲವು ತಿಂಗಳುಗಳ ಹಿಂದೆ ರಚಿತಾ ರಾಮ್, ಹರಿಪ್ರಿಯಾ, ಧನಂಜಯ್ ಮತ್ತು ರಿಷಭ್​ ಶೆಟ್ಟಿ ಬಿಡುಗಡೆ ಮಾಡಿದ್ದು ನೆನಪಿರಬಹುದು. ಅಷ್ಟೇ ಅಲ್ಲ, ಚಿತ್ರದ ಮೋಷನ್ ಪೋಸ್ಟರ್​ನ್ನು ಉಪೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

    ಇದನ್ನೂ ಓದಿ: ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸಿಎಂಗೆ ಪುರಾಣಿಕ್ ಮನವಿ

    ಈಗ ಚಿತ್ರದ ಮೊದಲ ಪಾತ್ರದ ಪೋಸ್ಟರ್​ ಅನಾವರಣಗೊಂಡಿದೆ. ಚಿತ್ರದ ಒಂದು ಕಥೆಯಲ್ಲಿ ಪ್ರೀತಿಕಾ ದೇಶಪಾಂಡೆ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೋಮವಾರ ಅವರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಕಥೆಯ ಮೇಕಿಂಗ್​ ವಿಡಿಯೋ ಸಹ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಪ್ರೀತಿಕಾ ಜತೆಗೆ, ರವಿಶಂಕರ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿರಣ್​ ನಿರ್ದೇಶನ ಮಾಡಿದ್ದಾರೆ.

    ‘ಪೆಂಟಗನ್’ ಐದು ಕಥೆಗಳನ್ನು ಒಳಗೊಂಡಿರುವ ಒಂದು ಆಂಥಾಲಜಿ ಸಿನಿಮಾ. ಐದು ಕಥೆಗಳನ್ನು ಐವರು ನಿರ್ದೇಶಕರು ನಿರ್ದೇಶಿಸಿದ್ದಾರೆ. ಐದೂ ಕಥೆಗಳ ಕಥಾವಸ್ತು ಬೇರೆಯಾಗಿದ್ದರೂ, ಎಲ್ಲದರಲ್ಲೂ ಒಂದು ಸಾಮಾನ್ಯ ವಿಷಯ ಅಡಕವಾಗಿದೆಯಂತೆ. ಈ ವಿಷಯವೇ ಎಲ್ಲ ಕಥೆಗಳಿಗೂ ಒಂದು ಕಾಮನ್ ಕೊಂಡಿಯಾಗಿರುತ್ತದೆ ಎನ್ನುತ್ತಾರೆ ಈ ಚಿತ್ರದ ನಿರ್ಮಾಣ ಮಾಡುವುದರ ಜತೆಗೆ ಒಂದು ಕಥೆಯ ನಿರ್ದೇಶನವನ್ನೂ ಮಾಡಿರುವ ಗುರು ದೇಶಪಾಂಡೆ. ಒಂದು ಕಥೆಯನ್ನು ಅವರು ನಿರ್ದೇಶಿಸಿದರೆ, ಉಳಿದ ನಾಲ್ಕು ಕಥೆಗಳನ್ನು ಆಕಾಶ್ ಶ್ರೀವತ್ಸ, ರಘು ಶಿವಮೊಗ್ಗ, ಚಂದ್ರಮೋಹನ್ ಮತ್ತು ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

    ಇದನ್ನೂ ಓದಿ: ಒಂದೇ ದಿನ ಬಿಡುಗಡೆಯಾಗಲಿದೆಯಾ ಅಕ್ಷಯ್​ ಅಭಿನಯದ ಎರಡು ಸಿನಿಮಾಗಳು?

    ಈಗಾಗಲೇ ಐದು ಕಿರುಚಿತ್ರಗಳ ಪೈಕಿ ನಾಲ್ಕರ ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸ ಸಹ ಮುಕ್ತಾಯವಾಗಿದೆಯಂತೆ. ಬಾಕಿ ಇರುವ ಒಂದು ಚಿತ್ರದ ಚಿತ್ರೀಕರಣವನ್ನು ಲಾಕ್​ಡೌನ್​ ಮುಗಿದ ನಂತರ ಮುಗಿಸಿ, ಆದಷ್ಟು ಬೇಗ ಬಿಡುಗಡೆ ಮಾಡಬೇಕೆಂದು ಚಿತ್ರತಂಡದ ಯೋಚನೆ.

    ‘ಟೈಗರ್​ 3’ ಚಿತ್ರದಲ್ಲಿ ‘ಕಿಸ್ಸಿಂಗ್​ ಸ್ಟಾರ್​’ಗೇನು ಕೆಲಸ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts