More

    ಬೆಂಕಿಯಿಂದ ಬೆಳೆ ರಕ್ಷಿಸಿಕೊಳ್ಳಲು ಹೋದ ರೈತ ಅದರಲ್ಲೇ ಬಿದ್ದು ಕರಕಲು!

    ಚಾಮರಾಜನಗರ: ಪಕ್ಕದ ಜಮೀನಿನಲ್ಲಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ತಮ್ಮ ಜಮೀನಿಗೂ ವ್ಯಾಪಿಸಬಹುದೆಂಬ ಆತಂಕದಿಂದ ನಂದಿಸಲು ಹೋದ ರೈತರೊಬ್ಬರು ಅಗ್ನಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

    ತಾಲೂಕಿನ ಅಮಚವಾಡಿ ಗ್ರಾಮದ ಮಹದೇವನಾಯಕ (63) ಮೃತಪಟ್ಟವರು. ಸೋಮವಾರ ಸಂಜೆ ಮಹದೇವನಾಯಕ ಅವರ ಪಕ್ಕದ ಜಮೀನಿನಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಕಾವಲು ಕಾಯುತ್ತಿದ್ದ ಮಹದೇವನಾಯಕ ಅವರು ಹೊತ್ತಿ ಉರಿಯುತ್ತಿದ್ದ ಬೆಂಕಿ ತಮ್ಮ ಜಮೀನಿಗೆ ಹರಡದಂತೆ ತಡೆಯಲು ಮುಂದಾಗಿದ್ದಾರೆ. ಈ ವೇಳೆ ಗಾಳಿಯ ರಭಸ ಹೆಚ್ಚಾಗಿದ್ದರಿಂದ ಬೆಂಕಿ ಇವರ ಬೆಳೆದಿದ್ದ ಹುರುಳಿ ಬೆಳೆಗೂ ವ್ಯಾಪಿಸಿ ಅದರ ಜ್ವಾಲೆ ಮಹದೇವನಾಯಕ ಅವರಿಗೂ ಬಡಿದಿದೆ. ಇದರಿಂದ ತಪ್ಪಿಸಿಕೊಳ್ಳಲು ಆಗದೆ ಗಾಯಗೊಂಡು ಮೂರ್ಛೆ ಹೋಗಿ ಕುಸಿದುಬಿದ್ದಿದ್ದಾರೆ. ಈ ವೇಳೆ ಬೆಂಕಿ ವ್ಯಾಪಿಸಿ ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿರಿ ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲೆ ಮಾರಣಾಂತಿಕ ಹಲ್ಲೆ: ಅಪರಾಧಿಗೆ ಇಂದು ಶಿಕ್ಷೆ ವಿಧಿಸಿದ ಕೋರ್ಟ್​!

    ಇಡೀ ಜಮೀನನ್ನು ಬೆಂಕಿ ಆವರಿಸಿ ಬೆಳೆಯೆಲ್ಲ ಸುಟ್ಟು ಭಸ್ಮವಾಗಿದೆ. ರಾತ್ರಿಯಾದರೂ ಮಹದೇವನಾಯಕ ಮನೆಗೆ ಬಾರದಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು ಜಮೀನಿಗೆ ತೆರಳಿದಾಗ ಬೆಂಕಿ ಅವಘಡ ನಡೆದಿರುವುದು ಗೊತ್ತಾಗಿದೆ. ಮಹದೇವನಾಯಕ ಸುಟ್ಟ ಗಾಯಗಳಿಂದ ಬಿದ್ದಿರುವುದನ್ನು ಕಂಡು ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ.

    ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲೆ ಮಾರಣಾಂತಿಕ ಹಲ್ಲೆ: ಅಪರಾಧಿಗೆ ಇಂದು ಶಿಕ್ಷೆ ವಿಧಿಸಿದ ಕೋರ್ಟ್​!

    ಪ್ರಿಯಕರನ ಕರೆ ಬಂತೆಂದು ಮನೆಯಿಂದ ಹೊರ ಹೋದ ಬಾಲಕಿ ಶವವಾಗಿ ಪತ್ತೆ! ಆ ರಾತ್ರಿಯ ರಹಸ್ಯ ಇಲ್ಲಿದೆ

    ಹಣ ಕೊಡದಿದ್ದರೆ ವಿಡಿಯೋ ವೈರಲ್, ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts