More

    ಮಿಟ್ಟಗಾನಹಳ್ಳಿ ಭೂಭರ್ತಿ ಕ್ವಾರಿ ಸಮೀಪ ಭಾರಿ ಬೆಂಕಿ; ಇನ್ನೆರಡು ದಿನ ತ್ಯಾಜ್ಯ ವಿಲೇವಾರಿ ವ್ಯತ್ಯಯ ಸಾಧ್ಯತೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಮಿಶ್ರ ತ್ಯಾಜ್ಯವನ್ನು ಭೂಭರ್ತಿ ಮಾಡುವ ಮಿಟ್ಟಗಾನಹಳ್ಳಿ ಕ್ವಾರಿಯ ಬಳಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ತ್ಯಾಜ್ಯ ವಿಲೇವಾರಿಯಲ್ಲಿ ವ್ಯತ್ಯವಾಗುವ ಸಾಧ್ಯತೆ ಇದೆ. ಭಾನುವಾರ ಸಂಜೆ ವೇಳೆ ಭೂಭರ್ತಿ ಕ್ವಾರಿಯ ಬಳಿ ಒಣಗಿದ ಗಿಡಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಗಾಳಿ ಹೆಚ್ಚಾಗಿದ್ದ ಕಾರಣ ಬೆಂಕಿ ಹೆಚ್ಚಾಗಿ ಆವರಿಸಿದ್ದು, ನಿಯಂತ್ರಣಕ್ಕೆ ಸಿಬ್ಬಂದಿ ಪರದಾಡಿದ್ದಾರೆ. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕಸ ಸುರಿಯುವ ಹಾದಿಯಲ್ಲಿ ಏನಾದರೂ ತೊಂದರೆಯಾಗಿದ್ದಲ್ಲಿ ಮುಂದಿನ ಎರಡು ದಿನಗಳ ಕಾಲ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಸಮಸ್ಯೆಯಾಗಲಿದೆ. ಇದರಿಂದ ನಗರದಲ್ಲಿಯೂ ತ್ಯಾಜ್ಯ ಉಳಿದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಕ್ವಾರಿಗೆ ಬೆಂಕಿ ಬಿದ್ದರೆ ತಡೆಯಲಾಗಲ್ಲ: ಹಿಂದಿನ ಭೂಭರ್ತಿ ಕ್ವಾರಿಯಾಗಿದ್ದ ಬೆಳ್ಳೂರು ಕ್ವಾರಿ ತೆರೆದ ಸ್ಥಿತಿಯಲ್ಲಿತ್ತು. ಹೀಗಾಗಿ, ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಮಿಟ್ಟಗಾನಹಳ್ಳಿ ತ್ಯಾಜ್ಯ ಭೂಭರ್ತಿ ಕ್ವಾರಿಯಲ್ಲಿ ಮೇಲೆ 2 ಅಡಿ ಎತ್ತರದಷ್ಟು ಮಣ್ಣು ಮುಚ್ಚಲಾಗುತ್ತದೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ತ್ಯಾಜ್ಯಕ್ಕೆ ಬೆಂಕಿ ಬಿದ್ದರೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿಯುತ್ತದೆ ಎಂದು ಪಾಲಿಕೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

    ಚಿಕ್ಕಪ್ಪನ ಮಗಳ ಮೇಲೇ ಅತ್ಯಾಚಾರ ನಡೆಸಿದ!; ಅಪ್ರಾಪ್ತ ವಯಸ್ಸಿನ ಬಾಲಕಿಗೆ ಆತಂಕಕಾರಿಯಾಗಿದ್ದ ಸೋದರ…

    ಪಾರ್ಟಿ-ಸಮಾರಂಭ ಅಂತ ಕರೊನಾ ರಿಯಾಯಿತಿ ನೀಡಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts