More

    ಚೆನ್ನೈ ಐಒಸಿಎಲ್ ಪ್ಲಾಂಟ್​ನಲ್ಲಿ ಸ್ಫೋಟ: ಓರ್ವ ಕಾರ್ಮಿಕ ಬೆಂಕಿಗೆ ಆಹುತಿ -ಹಲವರಿಗೆ ಗಾಯ

    ಚೆನ್ನೈ: ತೊಂಡಿಯಾರ್‌ಪೇಟ್‌ನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್​(ಐಒಸಿಎಲ್) ಪ್ಲಾಂಟ್‌ನಲ್ಲಿ ಬುಧವಾರ ಸ್ಫೋಟ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ

    ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭಿಕ್ಷುಕರ ದೇಣಿಗೆ: ಕೊಟ್ಟ ಹಣ ಕೇಳಿದ್ರೆ ಹೌಹಾರ್ತೀರಾ!
    ಕಾರ್ಖಾನೆಯ ಖಾಲಿ ಎಥೆನಾಲ್ ಶೇಖರಣಾ ತೊಟ್ಟಿಯಲ್ಲಿ ಕಾರ್ಮಿಕರು ರಂಧ್ರಕ್ಕೆ ಪೈಪ್​ ಅನ್ನು ಜೋಡಿಸುತ್ತಿದ್ದಾಗ ಈ ಘಟನೆ ನಡೆದಿದೆ.
    ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬುಧವಾರ ಮಧ್ಯಾಹ್ನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ಲಾಂಟ್ ನ ಬಾಯ್ಲರ್ ನಲ್ಲಿ ಕಾರ್ಮಿಕರು ದುರಸ್ತಿ ಕಾರ್ಯ ಕೈಗೊಂಡಿದ್ದಾಗ ಸ್ಫೋಟಗೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಕಾಣಿಸಿಕೊಂಡಿದೆ. ಬೆಂಕಿಯಿಂದ ಹೊರಬರಲಾಗದೆ ಇದರಲ್ಲಿ ಸಿಲುಕಿಕೊಂಡು ಒಬ್ಬ ಕಾರ್ಮಿಕ ಸುಟ್ಟು ಕರಕಲಾಗಿದ್ದಾನೆ.

    ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ. ಹಈಗಾಗಿಯೇ ಸಾವು ನೋವು ಹೆಚ್ಚಾಗುವ ಸಾಧ್ಯತೆಯಿದೆ. ಪೊಲೀಸರ ಪ್ರಕಾರ, ಕಾರ್ಮಿಕರು ಖಾಲಿ ಎಥೆನಾಲ್ ಶೇಖರಣಾ ತೊಟ್ಟಿಯಲ್ಲಿ ರಂಧ್ರವನ್ನು ಪೈಪ್​ಗಳೊಂದಿಗೆ ಬೆಸುಗೆ ಹಾಕುತ್ತಿದ್ದಾಗ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಿತು ಮತ್ತು ಸ್ಫೋಟದ ನಂತರ ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

    ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಅಧಿಕಾರಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಬೆಂಕಿ ನಂದಿಸಲಾಯಿತು ಎಂದು ಪೊಲೀಸರು ವಿವರಿಸಿದರು. ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹೊರಬರಬೇಕಿದ್ದು, ಐಒಸಿಎಲ್ ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ನೀಡಬೇಕಿದೆ.

    ಮ್ಯಾಂಚೆಸ್ಟರ್‌ಗೆ ತೆರಳುತಿದ್ದ ವಿಮಾನ ಬರ್ಮುಡಾದಲ್ಲಿ ಹಠಾತ್​ ಭೂಸ್ಪರ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts