More

    ಚಿನ್ನದ ವ್ಯಾಪಾರಿ ಬಳಿ 5 ಲಕ್ಷ ರೂ. ವಸೂಲಿ; ಇನ್​ಸ್ಪೆಕ್ಟರ್​ ಸೇರಿ ನಾಲ್ವರು ಪೊಲೀಸರ ವಿರುದ್ಧ ಎಫ್​ಐಆರ್​

    ಚಿಕ್ಕಮಗಳೂರು: ಚಿನ್ನದ ವ್ಯಾಪಾರಿಯೊಬ್ಬರಿಂದ 5 ಲಕ್ಷ ರೂ. ವಸೂಲಿ ಮಾಡಿದ್ದ ಆರೋಪದ ಮೇರೆಗೆ ಇನ್​ಸ್ಪೆಕ್ಟರ್​ ಸೇರಿ ನಾಲ್ವರು ಪೊಲೀಸರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

    ಅಜ್ಜಂಪುರ ಪೊಲೀಸ್ ಇನ್​ಸ್ಪೆಕ್ಟರ್​ ನಿಂಗರಾಜು ಹಾಗೂ ಮೂವರು ಕಾನ್​ಸ್ಟೆಬಲ್ ವಿರುದ್ದ ಎಫ್ಐಆರ್ ದಾಖಲಾಗಿದೆ. ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿ ಭಗವಾನ್ ಎಂಬವರನ್ನು ಮೇ 11ರಂದು ತಡೆದು ಹಣ ವಸೂಲಿ ಮಾಡಿದ ಆರೋಪ ಈ ನಾಲ್ವರ ವಿರುದ್ಧವಿದೆ. ಭಗವಾನ್ ದಾವಣಗೆರೆಯಿಂದ ಹಾಸನ ಜಿಲ್ಲೆಯ ಬೇಲೂರಿಗೆ ಚಿನ್ನ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿತ್ತು.

    ಭಗವಾನ್ 2.45 ಕೆ.ಜಿ. ಚಿನ್ನವನ್ನು ತನ್ನ ಕಾರಿನಲ್ಲಿ ಕೊಂಡೊಯ್ಯುತ್ತಿದ್ದಾಗ ಅಡ್ಡಗಟ್ಟಿದ್ದ ಪೊಲೀಸರು ಅದನ್ನು ಕಳ್ಳಮಾಲು ಎಂದು ಬೆದರಿಸಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಪಿಐ ನಿಂಗರಾಜು 5 ಲಕ್ಷ ರೂಪಾಯಿಗೆ ಸೆಟ್ಲ್ ಮಾಡಿದ್ದರು. ಈ ಸಂಬಂಧ ಜು. 21ರಂದು ಚಿಕ್ಕಮಗಳೂರು ಎಸ್​ಪಿಗೆ ಭಗವಾನ್ ದೂರು ನೀಡಿದ್ದರು.

    ಭಗವಾನ್ ದೂರಿನ ಮೇರೆಗೆ ತನಿಖೆ ನಡೆಸುವಂತೆ ಆಗಿನ ಎಸ್​ಪಿ ಅಕ್ಷಯ್ ಆದೇಶ ಮಾಡಿದ್ದರು. ಅದರಂತೆ ತನಿಖೆ ನಡೆದು ವರದಿ ಬಂದಿದ್ದು, ಇದೇ 17ರಂದು ಅಜ್ಜಂಪುರ ಠಾಣೆಯಲ್ಲಿ ದರೋಡೆ ಪ್ರಕರಣ ಎಂದು ಈ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ಬ್ರೂಸ್​ ಲೀ ಸತ್ತ 49 ವರ್ಷಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!; ಸಮರಕಲೆ ಪ್ರವೀಣ ಸತ್ತಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts