More

  ಆಸ್ಪತ್ರೆಗೆ ಸೂಕ್ತ ಜಾಗ ಹುಡುಕಿ

  ಚನ್ನಮ್ಮನ ಕಿತ್ತೂರು: ತಾಲೂಕು ಆಸ್ಪತ್ರೆಗೆ ಆಯ್ಕೆ ಮಾಡಿರುವ ಜಾಗ ಸೂಕ್ತವಾಗಿಲ್ಲ. ಹಾಗಾಗಿ, ಸೂಕ್ತ ಜಾಗ ಹುಡುಕುವ ಅವಶ್ಯಕತೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.

  ಪಟ್ಟಣದ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವರ್ತುಳದಲ್ಲಿ ಬುಧವಾರ ಚನ್ನಮ್ಮಾಜಿ ಪುತ್ಥಳಿಗೆ ಗೌರವ ಸಲ್ಲಿಸಿ ಮಾತನಾಡಿ, ಕಾಡು ಪ್ರದೇಶದಂತೆ ಗೋಚರಿಸುವ ಸ್ಥಳದಲ್ಲಿ ಆಸ್ಪತ್ರೆ ಕಟ್ಟುವ ನಿರ್ಧಾರ ಸರಿ ಅಲ್ಲ, ಇದು ರಸ್ತೆಗೂ ಸಹ ಹೊಂದಿಕೊಂಡಿಲ್ಲ. ಸ್ಥಳ ಪಟ್ಟಣದ ಹೊರವಲಯದಲ್ಲಿ ಇರುವುದರಿಂದ ರೋಗಿಗಳಿಗೂ ಅನನುಕೂಲವಾಗಲಿದೆ. ಸ್ಥಳ ಆಯ್ಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಜಿಲ್ಲಾ ವೈದ್ಯಾಧಿಕಾರಿ ಮಹೇಶ ಕೋಣಿ, ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಸಿದ್ದನ್ನವರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts