More

  ಅತಿಕ್ರಮ ಜಾಗ ತೆರವಿಗೆ ಉಪ ತಹಸೀಲ್ದಾರ್‌ಗೆ ಮನವಿ

  ತರೀಕೆರೆ: ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಅತಿಕ್ರಮವಾಗಿರುವ ಧಾರ್ಮಿಕ ಆಚರಣೆ ನಡೆಸುವ ಜಾಗ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ಸಮಾಜದ ಪದಾಧಿಕಾರಿಗಳು ಮಂಗಳವಾರ ಉಪ ತಹಸೀಲ್ದಾರ್ ಕೃಷ್ಣಮೂರ್ತಿಗೆ ಮನವಿ ಸಲ್ಲಿಸಿದರು.
  ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಪೂರ್ವಿಕರ ಕಾಲದಿಂದಲೂ ಅತ್ತಿಗನಾಳು ಗ್ರಾಮದ ಸರ್ವೇ ನಂ.122ರಲ್ಲಿರುವ 10 ಎಕರೆ ಜಾಗದಲ್ಲಿ ನಾಯಕ ಸಮಾಜದ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಆಚರಣೆ, ಪೂಜೆ ನಡೆಸುತ್ತಾ ಬಂದಿದ್ದು, ಸರ್ಕಾರಕ್ಕೆ ಸೇರಿದ ಈ ಜಾಗ ಸಮಾಜದ ಹಲವು ಅಗತ್ಯತೆಗೆ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
  ಈ ನಡುವೆ ಸಮುದಾಯಕ್ಕೆ ಮೀಸಲಿರಿಸಿದ 10 ಎಕರೆ ಸರ್ಕಾರಿ ಜಾಗ ಯಾವುದೇ ತಿಳಿವಳಿಕೆ ನೀಡದೆ ನಿವೃತ್ತ ಸೈನಿಕರಿಗೆ ಮಂಜೂರು ಮಾಡಿದ್ದು, ಈ ಜಾಗ ಸಾಗುವಳಿ ಮಾಡದೆ ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಅನಾದಿ ಕಾಲದಿಂದ ಸಮಾಜದ ಆಚರಣೆ ನಡೆಸಿರುವ ಸಾಕಷ್ಟು ಕುರುಹುಗಳಿರುವ ಜಾಗದ ಕುರಿತು ಅಡಕೆ ಬೆಳೆದಿರುವ ವ್ಯಕ್ತಿಯೊಬ್ಬರ ಬಳಿ ವಿಚಾರಿಸಲು ಹೋದ ಸಮುದಾಯದ ಪ್ರಮುಖರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದರು.
  ಸುತ್ತಮುತ್ತಲ ನಿವಾಸಿಗಳ ಹೇಳಿಕೆ ಪಡೆದು ವಿವಾದಿತ ಜಾಗದ ಖಾತೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಆರ್.ಸಂತೋಷ್, ಪ್ರಮುಖರಾದ ರಾಜೇಶ್, ಶಿವು, ಮಂಜುನಾಥ್, ಗೋವಿಂದಪ್ಪ, ಟಿ.ಕೆ.ಗಂಗಾಧರ್ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts